ವರ್ಷಾನುಗಟ್ಟಲೇ ಫ್ರಿಜ್ನಲ್ಲಿ ಇಡಲಾಗಿದ್ದ ನೂಡಲ್ಸ್ ಸೇವಿಸಿದ ಒಂದೇ ಕುಟುಂಬದ 9 ಮಂದಿ ಸಾವನ್ನಪ್ಪಿದ ಘಟನೆ ಚೀನಾದಲ್ಲಿ ನಡೆದಿದೆ. ನೂಡಲ್ನಲ್ಲಿದ್ದ ಜೋಳದ ಹಿಟ್ಟು ವಿಷವಾಗಿ ಬದಲಾಗಿದ್ದರಿಂದ ಈ ಸಾವು ಸಂಭವಿಸಿದೆ ಎನ್ನಲಾಗಿದೆ.
ಈಶಾನ್ಯ ಚೀನಾದ ಹೈಲೊಂಗ್ ಜಿಯಾಂಗ್ನಲ್ಲಿ ಈ ಘಟನೆ ಸಂಭವಿಸಿದೆ. ಮನೆಯಲ್ಲಿ ಯಾವುದೋ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕುಟುಂಬ ಈ ನೂಡಲ್ಸ್ ತಿಂದಿದೆ. ಅದೃಷ್ಟವಶಾತ್ ಮೂವರು ಮಕ್ಕಳು ಈ ನೂಡಲ್ ರುಚಿಸದ ಕಾರಣ ತಿನ್ನದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಹುಕಾಲ ಜೋಳದ ಹಿಟ್ಟನ್ನ ಶೇಖರಿಸಿ ಇಟ್ಟರೆ ಅದರಲ್ಲಿ ಬೊಂಗ್ಕ್ರೆಕ್ ಎಂಬ ಆಸಿಡ್ ಉತ್ಪಾದನೆ ಆಗುತ್ತೆ. ಇದು ಮನುಷ್ಯನ ಪ್ರಾಣಕ್ಕೆ ಸಂಚಕಾರ ಅಂತಾ ವೈದ್ಯರು ತಿಳಿಸಿದ್ದಾರೆ.