alex Certify ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಗುರುತಿಸುತ್ತೆ ಶ್ವಾನ…!

Chilean Police Train Dogs to Sniff Human Sweat to Detect Covid19

ಸ್ಯಾಂಟಿಯಾಗೊ: ಬೆವರಿನಿಂದ ಕೊರೊನಾ ಸೋಂಕನ್ನು ಪ್ರಾಥಮಿಕ ಹಂತದಲ್ಲೇ ನಾಯಿಗಳಿಂದ ಗುರುತಿಸುವ ಕಾರ್ಯಕ್ಕೆ ಚಿಲಿ ಪೊಲೀಸರು ಮುಂದಾಗಿದ್ದಾರೆ.

ಗೋಲ್ಡನ್‌ ರಿಟ್ರೀವರ್ ಹಾಗೂ ಲ್ಯಾಬ್ರಡಾರ್ ಜಾತಿಯ 4 ನಾಯಿಗಳಿಗೆ ಈಗಾಗಲೇ ಪ್ರಾಥಮಿಕ ತರಬೇತಿಯನ್ನು ಸ್ಯಾಂಟಿಯಾಗೋದಲ್ಲಿ ಆರಂಭಿಸಿದ್ದಾರೆ.‌ ಇಂಗ್ಲೆಂಡ್ ಈಗಾಗಲೇ ಈ ಕಾರ್ಯ ಕೈಗೊಂಡು ಭಾಗಶಃ ಯಶಸ್ವಿಯಾಗಿದೆ.‌

ಸ್ನೈಪರ್ ನಾಯಿಗಳು ಬಾಂಬ್, ಮಾದಕ ದ್ರವ್ಯಗಳು ಹಾಗೂ ಅಪರಾಧಿಗಳನ್ನು ಗುರುತಿಸುತ್ತವೆ ಎಂಬುದು ಎಲ್ಲರಿಗೂ ಗೊತ್ತು. ಪ್ರಾಥಮಿಕ ಹಂತದಲ್ಲೇ ತರಬೇತಿ ನೀಡಿದರೆ, ಮಲೇರಿಯಾ, ಕ್ಯಾನ್ಸರ್ ಹಾಗೂ ಪಾರ್ಕಿನ್ಸನ್ ಕಾಯಿಲೆಗಳನ್ನೂ ಗುರುತಿಸಬಲ್ಲವು ಎಂಬುದು ಈಗ ತಿಳಿಯುತ್ತಿರುವ ಹೊಸ ವಿಚಾರ.‌

“ನಾಯಿಗಳು 3 ಲಕ್ಷ ಆಘ್ರಾಣ ಗ್ರಾಹಕಗಳನ್ನು ಹೊಂದಿರುತ್ತವೆ. ಅವು ಮನುಷ್ಯನಿಗಿಂತ 50 ಪಟ್ಟು ಹೆಚ್ಚು ಆಘ್ರಾಣಿಸುವ ಶಕ್ತಿಯನ್ನು ಹೊಂದಿರುತ್ತವೆ” ಎಂದು ಲೆಫ್ಟಿನೆಂಟ್ ಕರ್ನಲ್ ಕ್ರಿಸ್ತಿನ್ ಅಕೆವೆಡೊ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...