ಯೂಟ್ಯೂಬ್ ನಲ್ಲಿ ಹವಾ ಎಬ್ಬಿಸಿದ ಚೈಲ್ಡ್ ಸ್ಟಾರ್ ರಿಯಾನ್ ಕಾಜಿ ಈಗ ಕೊರೊನಾ ವೈರಸ್ ಲಾಕ್ಡೌನ್ ನಡುವೆ ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾನೆ.
ಎಂಟು ವರ್ಷದ ರಿಯಾನ್ ಆಟಿಕೆಗಳಿಗೆ ಸಂಬಂಧಿಸಿದಂತೆ ಯೂಟ್ಯೂಬ್ ಚಾನಲ್ ಆರಂಭಿಸಿದ್ದು, 2019ರಲ್ಲಿ ಈ ಚಾನಲ್ ಮೂಲಕ 26 ಮಿಲಿಯನ್ ಯುಸ್ ಡಾಲರ್ ಗಳಿಸಿದ್ದಾನೆ ಈ ಪುಟ್ಟ ಪೋರ. ಜತೆಗೆ 25.7 ಲಕ್ಷ ಚಂದಾದಾರರನ್ನು ಈ ಹೊಂದಿದ್ದಾನೆ.
ಕೊರೋನಾ ಲಾಕ್ ಡೌನ್ ಬಳಿಕ ಒಳಾಂಗಣ ಚಟುವಟಿಕೆ ಮತ್ತು ವೈರಸ್ ತಜ್ಞರೊಂದಿಗೆ ಶೈಕ್ಷಣಿಕ ಸಂದರ್ಶನ ನಡೆಸಿಕೊಟ್ಟಿದ್ದಾರೆ. ಈ ಮೂಲಕ ತನ್ನ ಅನುಯಾಯಿಗಳಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಇಷ್ಟೇ ಅಲ್ಲದೆ ತಮ್ಮದೇ ಬ್ರಾಂಡ್ ನ ಟೂತ್ ಬ್ರಷ್, ಪೇಸ್ಟನ್ನು ಪರಿಚಯಿಸಿದ್ದಾರೆ.