
ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ.
ಹೌದು, ಮಹಿಳೆಯೊಬ್ಬರು ಶಾಪಿಂಗ್ ಮಾಲ್ ಗೆ ತೆರಳಿದ್ದಾಗ ಆಕೆ ಬೇಸರದಲ್ಲಿದ್ದರು. ಅಲ್ಲಿನ ಬಾಸ್ಕೆಟ್‌ನಲ್ಲಿ ಅನಾಮಧೇಯ ವ್ಯಕ್ತಿ ಬರೆದಿದ್ದ ಚೀಟಿ ಆಕೆಗೆ ಸ್ಫೂರ್ತಿದಾಯಕವಾಗಿದೆ.
ಬಾಸ್ಕೆಟ್ ಕೆಳಗೆ ಬರೆಯಲಾಗಿದ್ದ “ನೆವರ್ ಗಿವ್ ಅಪ್” (ಯಾವುದೇ ಕಾರಣಕ್ಕೂ ಸೋಲಬೇಡ) ಎನ್ನುವ ಸಂದೇಶವಿರುವ ಚೀಟಿ ಇತ್ತು. ಅದನ್ನು ನೋಡಿದ ಮಹಿಳೆಗೆ ಹೊಸ ಜೀವನೋತ್ಸವ ಬಂದಿದೆ ಅಂತೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ.