ಸೆಲೆಬ್ರಿಟಿ ಶೆಫ್ ಗಾರ್ಡನ್ ರಾಮ್ಸೇ ಜಗತ್ತಿನಾದ್ಯಂತ ಹೆಸರು ಮಾಡಿರುವ ಬಾಣಸಿಗರಾಗಿದ್ದಾರೆ. ಸಾಕಷ್ಟು ಟಿವಿ ಕಾರ್ಯಕ್ರಮಗಳನ್ನು ನಡೆಸಿಕೊಡುವ ರಾಮ್ಸೆ, ತಮ್ಮ ಮಾತುಗಾರಿಕೆಯ ಮೂಲಕ ಗಮನ ಸೆಳೆಯುತ್ತಾರೆ.
ಕೆಲವೊಮ್ಮೆ ತಮ್ಮ ಒರಟು ಮಾತುಗಳು ಹಾಗೂ ವಿವಾದಕಾರಿ ಹೇಳಿಕೆಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಲೇ ಇರುತ್ತಾರೆ ರಾಮ್ಸೆ. ಫೌಲ್ ಶಬ್ದಗಳ ಬಳಕೆಯಲ್ಲಿ ರುಸ್ತುಮರಾದ ರಾಮ್ಸೆ, ತಮ್ಮ ಹೊಸ ಶೋ Unchartedನಲ್ಲಿ 249 ಬಾರಿ ಅಸಭ್ಯ ಪದ ಬಳಸಿದ್ದಾರೆ. ಒಟ್ಟಾರೆಯಾಗಿ ರಾಮ್ಸೆ ಬಾಯಿಂದ 302 ಬಾರಿ ಅಸಭ್ಯ ಶಬ್ದಗಳು ಹೊಮ್ಮಿವೆ ಎಂದು The Sun ನಿಯತಕಾಲಿಕೆ ವರದಿ ಮಾಡಿದೆ.
ನ್ಯಾಷನಲ್ ಜಿಯಾಗ್ರಾಫಿಕ್ ವಾಹಿನಿಯಲ್ಲಿ ಬರುತ್ತಿರುವ ತಮ್ಮ ಹೊಸ ಕಾರ್ಯಕ್ರಮದ ಭಾಗವಾಗಿ ಜಗತ್ತನ್ನು ಸುತ್ತಲು ಹೊರಟಿದ್ದಾರೆ ರಾಮ್ಸೆ.