alex Certify ಗಾಳಿಯಿಂದಲೂ ಹರಡುತ್ತಾ ಕೊರೊನಾ…? ಸಂಶೋಧನಾ ವರದಿ ಹೇಳಿದೆ ಈ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಳಿಯಿಂದಲೂ ಹರಡುತ್ತಾ ಕೊರೊನಾ…? ಸಂಶೋಧನಾ ವರದಿ ಹೇಳಿದೆ ಈ ಸಂಗತಿ

CDC Finally Admits Coronavirus Spreads Through Air, Takes It Down Hours Later

ಕೊರೊನಾ ವೈರಾಣು ಗಾಳಿಯಲ್ಲಿ ಹರಡಬಲ್ಲದೆ ? ಹೌದು ಎನ್ನುತ್ತಿದೆ ಅಮೆರಿಕಾದ ರೋಗ ನಿಯಂತ್ರಣ ಕೇಂದ್ರ (ಸಿ.ಡಿ.ಸಿ.)ದ ಸಂಶೋಧನಾ ವರದಿ. ಜಗತ್ತಿನ ಹಲವು ದೇಶಗಳಲ್ಲಿ ಕೊರೊನಾ ವೈರಾಣು 10ನೇ ತಿಂಗಳಲ್ಲೂ ಪ್ರವೇಶಿಸುತ್ತಿದೆ. ಇದರ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ.

ಸಿ.ಡಿ.ಸಿ. ಅಧ್ಯಯನದ ಪ್ರಕಾರ ಕೊರೊನಾ ವೈರಾಣವು ಕೇವಲ ಸೀನುವುದು, ಕೆಮ್ಮುವುದರಿಂದ ಹೊರಬರುವ ಎಂಜಲಿನಿಂದ ಮಾತ್ರವಲ್ಲದೆ, ಗಾಳಿಯಲ್ಲೂ ಹರಡಲಿದೆ. ಗಾಳಿಯಲ್ಲಿ ಕೂಡ 6 ಅಡಿವರೆಗೆ ಚಲಿಸಬಲ್ಲದು. ಅಂದರೆ, ಉಸಿರಾಟದ ಮೂಲಕ ಹರಡುವ ಸಾಧ್ಯತೆಗಳಿದ್ದು, ಗಾಳಿ ಶುದ್ಧೀಕರಣ ಉಪಕರಣಗಳನ್ನು ಬಳಸುವುದು ಸೂಕ್ತ ಎಂದು ಶಿಫಾರಸು ಮಾಡಿದೆ.

ಆದರೆ, ಇದನ್ನು ತಾತ್ಕಾಲಿಕವಾಗಿ ತಳ್ಳಿ ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ, ಉಸಿರಾಟಕ್ಕೆ ಸೂಕ್ತ ವಾತಾವರಣ ಇಲ್ಲದಿರುವ ಒಳಾಂಗಣದಲ್ಲಿ ಅಂತಹ ಸಾಧ್ಯತೆ ಇದೆ. ಏಕೆಂದರೆ, ಅಂತಹ ಜಾಗದಲ್ಲಿ ಸೀನಿದಾಗ, ಕೆಮ್ಮಿದಾಗ ಪರಸ್ಪರ ಎಂಜಲು ಹಾರುವುದು ಸಹಜ ಎಂದು ಡಬ್ಲ್ಯುಎಚ್ಒ ಕಾರ್ಯಕಾರಿ ನಿರ್ದೇಶಕ ಮೈಕ್ ರ್ಯಾನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...