alex Certify ಎದೆ ನಡುಗಿಸುತ್ತೆ ವೈರಲ್ ಆಗಿರುವ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ನಡುಗಿಸುತ್ತೆ ವೈರಲ್ ಆಗಿರುವ ಈ ವಿಡಿಯೋ

ಬೀಜಿಂಗ್: ಸ್ಫೋಟಕಗಳನ್ನು ಪರಿಣಿತರು ಮಾತ್ರ ಬಳಸಬೇಕು. ಕೆಲವು ದುರಾದೃಷ್ಟದ ಕ್ಷಣಗಳಲ್ಲಿ ಪರಿಣಿತರೂ ತಪ್ಪು ಮಾಡುತ್ತಾರೆ.

ನೌಕಾ ತರಬೇತಿನಿರತ‌ ಸಿಬ್ಬಂದಿಯೊಬ್ಬ ಗ್ರೆನೇಡ್ ಗುರಿ ಇಟ್ಟು ಎಸೆಯದ ಕಾರಣ ಆಪತ್ತು ತಂದುಕೊಂಡ ಚೀನಾದ ವಿಡಿಯೋ‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಚೀನಾದ ನೌಕಾ ವಿಮಾನಯಾನ ವಿವಿಯಲ್ಲಿ ನಡೆದಿದೆ ಎನ್ನಲಾಗಿದೆ.

ಗ್ರೆನೇಡ್ ಸ್ಫೋಟಿಸುವ ತರಬೇತಿ ವೇಳೆ ನಡೆದ ಘಟನೆ ಇದಾಗಿದೆ. ಒಬ್ಬ ಶಿಬಿರಾರ್ಥಿ ಸುರಕ್ಷಾ ಗೋಡೆಯಾಚೆ ಅದನ್ನು ಎಸೆಯಬೇಕಾಗಿತ್ತು. ಆದರೆ, ಆತ ಗಡಿಬಿಡಿಯಲ್ಲಿ ಗುರಿತಪ್ಪಿ ಎಸೆದ ಕಾರಣ ಗ್ರೆನೇಡ್ ಗೋಡೆಗೆ ಬಡಿದು ಎಸೆದವರ ಸಮೀಪವೇ ಬಂದು ಬೀಳುತ್ತದೆ.

ಅದೃಷ್ಟಕ್ಕೆ ಶಿಬಿರಾರ್ಥಿಯ ತರಬೇತಿ ಅಧಿಕಾರಿ ಆತನನ್ನು ಎಳೆದು ರಕ್ಷಣಾ ಗುಂಡಿಯಲ್ಲಿ ಬಿದ್ದು, ನಡೆಯಬಹುದಾಗಿದ್ದ ಅಪಾಯ ತಪ್ಪಿಸುತ್ತಾನೆ.‌ ಘಟನೆಯಲ್ಲಿ ಒಬ್ಬ ವ್ಯಕ್ತಿಗೆ ಗಾಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...