alex Certify ಮೇಕೆ ಮಾಡಿದ ಕೆಲಸಕ್ಕೆ ಪೊಲೀಸ್‌ ಅಧಿಕಾರಿ ಕಕ್ಕಾಬಿಕ್ಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆ ಮಾಡಿದ ಕೆಲಸಕ್ಕೆ ಪೊಲೀಸ್‌ ಅಧಿಕಾರಿ ಕಕ್ಕಾಬಿಕ್ಕಿ

ಯಾರಾದರೂ ತಪ್ಪು ಮಾಡಿದರೆ ಪೊಲೀಸ್‌ ಅಧಿಕಾರಿಗಳು ಶಿಕ್ಷೆ ವಿಧಿಸುವುದು ಸಹಜ. ಆದರೆ ಈ ಘಟನೆಯಲ್ಲಿ ತಪ್ಪಿತಸ್ಥ ಎದುರಿಗೆ ಇದ್ದರೂ, ಸಾಕ್ಷಿಯಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯಿದ್ದಾರೆ.

ಹೌದು, ಈಗ ಹೇಳಲು ಹೊರಟಿರುವುದು ಯಾವುದೇ ದೊಡ್ಡ ರೌಡಿ ಶೀಟರ್‌ ಕಥೆಯಲ್ಲ. ಬದಲಿಗೆ ಡೌಗ್ಲಾಸ್‌ನ ಪೊಲೀಸ್‌ ಅಧಿಕಾರಿಯೊಬ್ಬರ ಕಾರಿನಲ್ಲಿದ್ದ ಪೇಪರ್ ‌ಗಳನ್ನು ತಿಂದ ಮೇಕೆಯ ಕಥೆ. ಪೊಲೀಸ್‌ ಅಧಿಕಾರಿ ಜಾರ್ಜಿಯಾ ತಮ್ಮ ಪ್ಯಾಟ್ರೋಲ್‌ ಕಾರಿನಲ್ಲಿ ಕೆಲವು ದಾಖಲೆಗಳನ್ನು ಇಟ್ಟು ಹೊರಕ್ಕೆ ಹೋಗಿದ್ದರು. ಈ ವೇಳೆ ಮೇಕೆಯೊಂದು ಕಾರಿನ ಕಿಟಕಿಯ ಮೂಲಕ ಒಳಕ್ಕೆ ಬಂದು ಸೀಟಿನ ಮೇಲಿಟ್ಟಿದ್ದ ದಾಖಲೆಗಳನ್ನು ತಿಂದು ಹಾಕಿದೆ.

ಬಳಿಕ ಕಾರಿನ ಬಳಿ ಬಂದಾಗ ಅಧಿಕಾರಿಗೆ ವಿಷಯ ಗೊತ್ತಾಗಿದ್ದು, ಬಾಡಿ ಕ್ಯಾಮರಾದಲ್ಲಿ ಇಡೀ ಘಟನೆ ರೆಕಾರ್ಡ್‌ ಆಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಅಧಿಕಾರಿ, ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಭಾರಿ ವೈರಲ್‌ ಆಗಿದ್ದು, ಅನೇಕರು ಮೇಕೆಯ ವಿರುದ್ಧ ಯಾವ ಕೇಸ್‌ ಹಾಕುವಿರಿ ಎಂದು ಪೊಲೀಸ್‌ ಅಧಿಕಾರಿಯ ಕಾಲೆಳೆದಿದ್ದಾರೆ.

Here is a little Friday humor to help lighten the mood. * WARNING* Before watching the video please understand that there is some mild cursing and if you are easly offended please keep scrolling. To explain what you are about to see, the deputy went to a residence to serve some civil papers. The deputy explained that due to the number of houses she visits daily, she routinely leaves her vehicle's door open because she has had to reteat on a number of occasions from vicious dogs. Never once did she expect or even consider what was about to happen this day! Eventhough she was knocked to the ground she was not physically harmed in the incident. At the end of the day we all got a little laugh out of it and we hope you do as well!

Posted by Douglas County Sheriff's Office (Georgia) on Friday, September 4, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...