ಯಾರಾದರೂ ತಪ್ಪು ಮಾಡಿದರೆ ಪೊಲೀಸ್ ಅಧಿಕಾರಿಗಳು ಶಿಕ್ಷೆ ವಿಧಿಸುವುದು ಸಹಜ. ಆದರೆ ಈ ಘಟನೆಯಲ್ಲಿ ತಪ್ಪಿತಸ್ಥ ಎದುರಿಗೆ ಇದ್ದರೂ, ಸಾಕ್ಷಿಯಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯಿದ್ದಾರೆ.
ಹೌದು, ಈಗ ಹೇಳಲು ಹೊರಟಿರುವುದು ಯಾವುದೇ ದೊಡ್ಡ ರೌಡಿ ಶೀಟರ್ ಕಥೆಯಲ್ಲ. ಬದಲಿಗೆ ಡೌಗ್ಲಾಸ್ನ ಪೊಲೀಸ್ ಅಧಿಕಾರಿಯೊಬ್ಬರ ಕಾರಿನಲ್ಲಿದ್ದ ಪೇಪರ್ ಗಳನ್ನು ತಿಂದ ಮೇಕೆಯ ಕಥೆ. ಪೊಲೀಸ್ ಅಧಿಕಾರಿ ಜಾರ್ಜಿಯಾ ತಮ್ಮ ಪ್ಯಾಟ್ರೋಲ್ ಕಾರಿನಲ್ಲಿ ಕೆಲವು ದಾಖಲೆಗಳನ್ನು ಇಟ್ಟು ಹೊರಕ್ಕೆ ಹೋಗಿದ್ದರು. ಈ ವೇಳೆ ಮೇಕೆಯೊಂದು ಕಾರಿನ ಕಿಟಕಿಯ ಮೂಲಕ ಒಳಕ್ಕೆ ಬಂದು ಸೀಟಿನ ಮೇಲಿಟ್ಟಿದ್ದ ದಾಖಲೆಗಳನ್ನು ತಿಂದು ಹಾಕಿದೆ.
ಬಳಿಕ ಕಾರಿನ ಬಳಿ ಬಂದಾಗ ಅಧಿಕಾರಿಗೆ ವಿಷಯ ಗೊತ್ತಾಗಿದ್ದು, ಬಾಡಿ ಕ್ಯಾಮರಾದಲ್ಲಿ ಇಡೀ ಘಟನೆ ರೆಕಾರ್ಡ್ ಆಗಿದೆ. ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಅಧಿಕಾರಿ, ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಭಾರಿ ವೈರಲ್ ಆಗಿದ್ದು, ಅನೇಕರು ಮೇಕೆಯ ವಿರುದ್ಧ ಯಾವ ಕೇಸ್ ಹಾಕುವಿರಿ ಎಂದು ಪೊಲೀಸ್ ಅಧಿಕಾರಿಯ ಕಾಲೆಳೆದಿದ್ದಾರೆ.
https://www.facebook.com/DCSheriffGA/videos/237251210949862