alex Certify ಅಗ್ನಿ ದುರಂತದಿಂದ ಪಾರಾಗಲು ಐದಂತಸ್ತಿನ ಕಟ್ಟಡದಿಂದ ಜಿಗಿದರೂ ಬದುಕುಳಿದ ಬೆಕ್ಕು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ನಿ ದುರಂತದಿಂದ ಪಾರಾಗಲು ಐದಂತಸ್ತಿನ ಕಟ್ಟಡದಿಂದ ಜಿಗಿದರೂ ಬದುಕುಳಿದ ಬೆಕ್ಕು..!

ಬೆಕ್ಕುಗಳು ನೋಡೋಕೆ ಮುದ್ದು ಮುದ್ದಾಗಿ ಕಾಣುತ್ತೆ. ಆದರೆ ಅವುಗಳ ಬುದ್ಧಿ ಕೂಡ ಅಷ್ಟೇ ತೀಕ್ಷ್ಣವಾಗಿ ಇರುತ್ತೆ ಅನ್ನೋ ಮಾತನ್ನೂ ನಾವು ತೆಗೆದು ಹಾಕುವಂತಿಲ್ಲ. ತನ್ನ ಜೀವವನ್ನ ಕಾಪಾಡಿಕೊಳ್ಳುವ ಸಲುವಾಗಿ ಬೆಕ್ಕುಗಳು ಎಂತಹ ಕಠಿಣ ಸವಾಲುಗಳನ್ನ ಎದುರಿಸುವ ಸಾಮರ್ಥ್ಯ ಹೊಂದಿವೆ.

ಚಿಕಾಗೋದ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ಅನಾಹುತ ಸಂಬಂಧಿ ವಿಡಿಯೋವೊಂದನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದೆ. ಈ ವಿಡಿಯೋದಲ್ಲಿ ಕಟ್ಟಡವೊಂದರ ಐದನೇ ಅಂತಸ್ತಿನಲ್ಲಿ ಅಗ್ನಿ ದುರಂತ ಸಂಭವಿಸಿರೋದನ್ನ ನೀವು ಕಾಣಬಹುದಾಗಿದೆ.

ಹೊಗೆಯಿಂದ ಆವೃತವಾಗಿದ್ದ ಕಟ್ಟಡದ ಕಿಟಕಿಯಿಂದ ಮುಖ ಹೊರಗೆ ಹಾಕುವ ಬೆಕ್ಕೊಂದು ಧಪ್​ ಅಂತಾ ನೆಲಕ್ಕೆ ಹಾರುವ ಮೂಲಕ ಅಗ್ನಿ ಅವಘಡದಿಂದ ಪಾರಾಗಿದೆ. ನೆಲಕ್ಕೆ ಹಾರಿ ಬಿದ್ದ ಬೆಕ್ಕು ಕೂಡಲೇ ಆ ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಅದೃಷ್ಟವಶಾತ್​ ಈ ಅಗ್ನಿ ಅವಘಡದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

— Chicago Fire Media (@CFDMedia) May 13, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...