
ಚಿಕಾಗೋದ ಅಗ್ನಿಶಾಮಕ ದಳ ಸಿಬ್ಬಂದಿ ಅಗ್ನಿ ಅನಾಹುತ ಸಂಬಂಧಿ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ಕಟ್ಟಡವೊಂದರ ಐದನೇ ಅಂತಸ್ತಿನಲ್ಲಿ ಅಗ್ನಿ ದುರಂತ ಸಂಭವಿಸಿರೋದನ್ನ ನೀವು ಕಾಣಬಹುದಾಗಿದೆ.
ಹೊಗೆಯಿಂದ ಆವೃತವಾಗಿದ್ದ ಕಟ್ಟಡದ ಕಿಟಕಿಯಿಂದ ಮುಖ ಹೊರಗೆ ಹಾಕುವ ಬೆಕ್ಕೊಂದು ಧಪ್ ಅಂತಾ ನೆಲಕ್ಕೆ ಹಾರುವ ಮೂಲಕ ಅಗ್ನಿ ಅವಘಡದಿಂದ ಪಾರಾಗಿದೆ. ನೆಲಕ್ಕೆ ಹಾರಿ ಬಿದ್ದ ಬೆಕ್ಕು ಕೂಡಲೇ ಆ ಸ್ಥಳದಿಂದ ಕಾಲ್ಕಿತ್ತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅದೃಷ್ಟವಶಾತ್ ಈ ಅಗ್ನಿ ಅವಘಡದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.