alex Certify ಸಂಸತ್‌ ಸಮಿತಿ ಸದಸ್ಯರ ಸಭೆಯಲ್ಲಿ ಮಧ್ಯಪ್ರವೇಶ ಮಾಡಿದ ಬೆಕ್ಕು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಸತ್‌ ಸಮಿತಿ ಸದಸ್ಯರ ಸಭೆಯಲ್ಲಿ ಮಧ್ಯಪ್ರವೇಶ ಮಾಡಿದ ಬೆಕ್ಕು…!

ಮನೆಯಿಂದ ಕೆಲಸ ಮಾಡುವಾಗ ಆಗುವ ಅನೇಕ ವಿನೋದಮಯ ಅನುಭವಗಳ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇಂಥದ್ದೇ ಒಂದು ಫನ್ನಿ ‘work from home’ ಅನುಭವವನ್ನು ಬ್ರಿಟನ್ ಸಂಸತ್ತಿನ ಸ್ಪೀಕರ್‌ ತಮ್ಮ ಮುದ್ದು ಬೆಕ್ಕಿನಿಂದ ಅನುಭವಿಸಿದ್ದು, ಅದೀಗ ಭಾರೀ ಸುದ್ದಿಯಾಗುತ್ತಿದೆ.

ಕೊರೋನಾ ವೈರಸ್ ಇರುವ ಕಾರಣದಿಂದ ಬ್ರಿಟನ್ ಸಂಸತ್ತಿನ ಸಮಿತಿಯೊಂದು ಆನ್ಲೈನ್‌ನಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಮ್ಮಿಕೊಂಡಿದ್ದರು. ವಾಣಿಜ್ಯ ತಜ್ಞೆ ಸಾಲ್ಲಿ ಜೋನ್ಸ್‌ ಐರೊಪ್ಯ ಒಕ್ಕೂಟದ ಸೇವೆಗಳ ಉಪ ಸಮಿತಿಯೊಂದರ ಸಭೆಯಲ್ಲಿ ನಿರತರಾಗಿದ್ದರು. ಈ ವೇಳೆ ಅವರ ಮುದ್ದಿನ ಬೆಕ್ಕು ಬಂದು ತೊಡೆ ಮೇಲೆ ಕುಳಿತುಬಿಟ್ಟಿದೆ.

ಬೆಕ್ಕನ್ನು ಕಂಡ ಸಭಿಕರೊಬ್ಬರು, ’ವೆಲ್ ‌ಕಮ್ ಕ್ಯಾಟ್’ ಎನ್ನುವ ಮೂಲಕ, ಈ ’ಮಧ್ಯ’ಪ್ರವೇಶವನ್ನು ಅವರೂ ಸಹ ಎಂಜಾಯ್ ಮಾಡಿದ್ದಾರೆ. ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿದ ಸಾಲ್ಲಿ, ತಮ್ಮ ಬೆಕ್ಕಿನ ತಲೆ ನೇವರಿಸುತ್ತಲೇ, ಅದು ಮತ್ತಷ್ಟು ಚೇಷ್ಟೆ ಮಾಡುವ ಮೂಲಕ ಸಭೆಗೆ ಡಿಸ್ಟರ್ಬ್ ಮಾಡದಂತೆ ನೋಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...