ಮಾದಕ ದ್ರವ್ಯಗಳ ಕಳ್ಳಸಾಗಾಟದಲ್ಲಿ ಬಂಧಿಸಲಾಗಿದ್ದ ಬೆಕ್ಕೊಂದು ಜೈಲಿನಿಂದ ತಪ್ಪಿಸಿಕೊಂಡು ಓಡಿಬಿಟ್ಟಿದೆ. ಡ್ರಗ್ಸ್ ಹಾಗೂ ಸಿಮ್ ಕಾರ್ಡ್‌ಗಳ ಕಳ್ಳಸಾಗಾಟದ ಸಿಂಡಿಕೇಟ್ ಜೊತೆಗೆ ಕೆಲಸ ಮಾಡಿದ ಆಪಾದನೆ ಬೆಕ್ಕಿನ ಮೇಲೆ ಇದೆ.
ಶ್ರೀಲಂಕಾದ ವೆಲಿಕಡಾ ಜೈಲಿನಲ್ಲಿ ಈ ಬೆಕ್ಕನ್ನು ಇರಿಸಲಾಗಿತ್ತು. ಬೆಕ್ಕಿನ ಕತ್ತಿಗೆ ನೇತು ಹಾಕಲಾಗಿದ್ದ ಪುಟ್ಟದೊಂದು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ 2 ಗ್ರಾಂ ಹೆರಾಯಿನ್, ಮೆಮೋರಿ ಚಿಪ್ ಹಾಗೂ ಎರಡು ಸಿಮ್ ಕಾರ್ಡ್‌ಗಳು ಸಿಕ್ಕಿವೆ.
ಶ್ರೀಲಂಕಾದಲ್ಲಿ ಡ್ರಗ್ಸ್ ಸಮಸ್ಯೆ ಬಹಳ ದೊಡ್ಡದಿದ್ದು, ಮಾದಕ ದ್ರವ್ಯಗಳ ಕಳ್ಳಸಾಗಾಟಗಾರ ಬಂಧನದ ಪ್ರಕರಣಗಳು ದಿನೇ ದಿನೇ ಹೆಚ್ಚತ್ತಲೇ ಇವೆ. ಈ ಬೆಕ್ಕಿನ ಘಟನೆಗೂ ಮುನ್ನ ಪೊಲೀಸರು, ಹದ್ದೊಂದನ್ನು ಇದೇ ಆರೋಪದ ಮೇಲೆ ಬಂಧಿಸಿದ್ದರು.