ಟ್ವಿಟರ್‌ನಲ್ಲಿ ಆಗಾಗ ಸೂಪರ್ ಕ್ಯೂಟ್ ವಿಡಿಯೋಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಸಾಲಿಗೆ ಮತ್ತೊಂದು ವಿಡಿಯೋ ಸೇರಿಕೊಂಡಿದ್ದು, ಬೆಕ್ಕೊಂದರ ಚಿನ್ನಾಟವನ್ನು ನೆಟ್ಟಿಗರು ನೋಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಕೂಲರ್ ಒಂದರ ನಲ್ಲಿಯನ್ನು ತಿರುಗಿಸಿಕೊಂಡು ಬೆಕ್ಕೊಂದು ನೀರು ಕುಡಿಯುತ್ತಿರುವ ವಿಡಿಯೋ ವೈರಲ್ ಆಗಿದೆ. 11 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ಬೆಕ್ಕು ತನ್ನ ಹಿಂಗಾಲುಗಳ ಮೇಲೆ ನಿಂತುಕೊಂಡು, ತನ್ನ ಎಡ ಮುಂಗಾಲಿನ ನೆರವಿನಿಂದ ನಲ್ಲಿಯನ್ನು ಒತ್ತುತ್ತಿರುವುದನ್ನು ನೋಡಬಹುದಾಗಿದೆ.
ಈ ವಿಡಿಯೋವನ್ನು ನೋಡಿದ ನೆಟ್ಟಿಗರು, ತಮ್ಮ ಬೆಕ್ಕುಗಳು ಮಾಡುವ ಚೇಷ್ಟೆಗಳನ್ನು ಕಾಮೆಂಟ್ ಸೆಕ್ಷನ್‌ನಲ್ಲಿ ಹಂಚಿಕೊಂಡಿದ್ದಾರೆ.
https://twitter.com/akkitwts/status/1299289238362443776?ref_src=twsrc%5Etfw%7Ctwcamp%5Etweetembed%7Ctwterm%5E1299289238362443776%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fcat-drinks-water-from-cooler-in-viral-video-smarty-pants-says-internet-1716509-2020-08-29