alex Certify ಬೆಕ್ಕು ಮಾಡಿದ ಅವಾಂತರಕ್ಕೆ ಮನೆ ಮಾಲೀಕರು ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಕ್ಕು ಮಾಡಿದ ಅವಾಂತರಕ್ಕೆ ಮನೆ ಮಾಲೀಕರು ಕಂಗಾಲು

ಬೆಕ್ಕುಗಳನ್ನ ಚೇಷ್ಠೆ ಬುದ್ಧಿಯ ಪ್ರಾಣಿಗಳು ಅಂತಾ ಕರೆಯಲಾಗುತ್ತೆ. ಇದೇ ಮಾತಿಗೆ ಉದಾಹರಣೆ ಎಂಬಂತೆ ನಲ್ಲಿಯನ್ನ ಆನ್​ ಮಾಡಲು ಕಲಿತಿದ್ದ ಬೆಕ್ಕೊಂದು ಮನೆ ಮಾಲೀಕೆಗೆ ಲಕ್ಷಗಟ್ಟಲೇ ಹಣ ನಷ್ಟ ಮಾಡಿದೆ.

26 ವರ್ಷದ ಜಾಸ್ಮಿನ್​ ಸ್ಟಾರ್ಕ್​ ಎಂಬವರು ಕೇವಲ ಅರ್ಧ ಗಂಟೆ ಮನೆಯಿಂದ ಹೊರಹೋಗಿದ್ದಾರೆ. ಮನೆಗೆ ವಾಪಸ್ಸಾಗೋ ಅಷ್ಟರಲ್ಲಿ ಆಕೆಯ ಮನೆ ಜಲಾವೃತವಾಗಿದೆ. ಅಂದಹಾಗೆ ಇದಕ್ಕೆ ಕಾರಣ ಆಕೆಯ ಬೆಕ್ಕು ಅಂಬರ್​

ಅಂಬರ್​ ಹೆಸರಿನ ಬೆಕ್ಕು ಕೆಲದಿನಗಳ ಹಿಂದಷ್ಟೇ ನಲ್ಲಿಯನ್ನ ಹೇಗೆ ಬಳಸಬೇಕು ಅನ್ನೋದನ್ನ ಕಲಿತಿತ್ತು. ಕೆಲ ದಿನಗಳ ಹಿಂದಷ್ಟೇ ಜಾಸ್ಮಿನ್​ ಮತ್ತಾಕೆಯ ಸಂಗಾತಿ ರೊಬ್​ ಬೆಕ್ಕು ನಲ್ಲಿ ಬಳಕೆ ಮಾಡ್ತಿರೋದನ್ನ ವಿಡಿಯೋ ಕೂಡ ಮಾಡಿದ್ದರು.

ಆದರೆ ಅರ್ಧ ಗಂಟೆಗೆ ಅಂತಾ ಮನೆ ಬಿಟ್ಟು ಹೋಗಿದ್ದ ಜಾಸ್ಮಿನ್​ ಬಚ್ಚಲು ಮನೆಯ ಬಾಗಿಲು ಹಾಕೋಕೆ ಮರೆತಿದ್ದಾರೆ. ಇದಕ್ಕೆ ಕಾಯ್ತಿದ್ದ ಬೆಕ್ಕು ನಲ್ಲಿ ಆನ್​ ಮಾಡಿದೆ. ಪರಿಣಾಮ ಮನೆಯಲ್ಲಿನ ಎಲ್ಲಾ ಪೀಠೋಪಕರಣಗಳು ನೀರುಪಾಲಾಗಿದ್ದು ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...