alex Certify ದಂಡ ಕಟ್ಟಲು ದುಡ್ಡಿಲ್ಲದೆ ಪುಶ್‌ಅಪ್‌ ಮಾಡಿದ ಪ್ರವಾಸಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಡ ಕಟ್ಟಲು ದುಡ್ಡಿಲ್ಲದೆ ಪುಶ್‌ಅಪ್‌ ಮಾಡಿದ ಪ್ರವಾಸಿಗರು

Cashless Tourists Without Masks Made to Do 50 Push-ups Instead of Paying Fine in Bali

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಾಲಿಡೇ ಮಾಡಲು ಬರುವ ಪ್ರವಾಸಿಗರು ಮಾಸ್ಕ್ ಧರಿಸದೇ ಇದ್ದಲ್ಲಿ ವಿಶಿಷ್ಟವಾದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.

ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಪ್ರವಾಸಿಗರಿಬ್ಬರಿಗೆ ಪುಶ್‌ ಅಪ್ ಮಾಡುವ ಶಿಕ್ಷೆಯನ್ನು ಅಲ್ಲಿನ ಪೊಲೀಸರು ಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ಕೋವಿಡ್-19 ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಕಳೆದ ವರ್ಷದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಿದ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.

ಮಾಸ್ಕ್‌ ಹಾಕಿಕೊಳ್ಳದೇ ಅಡ್ಡಾಡುತ್ತಿದ್ದ 70 ಪ್ರವಾಸಿಗರನ್ನು ಹಿಡಿದ ಇಂಡೋನೇಷ್ಯಾ ಪೊಲೀಸರು, ಸುಮಾರು $7 ದಂಡ ವಿಧಿಸಿದ್ದಾರೆ. 30 ಮಂದಿ ತಮ್ಮ ಬಳಿ ದಂಡ ಕಟ್ಟಲು ದುಡ್ಡಿಲ್ಲ ಎಂದ ಕಾರಣ ಅವರಿಗೆ ಪುಶ್‌ಅಪ್ ಮಾಡುವ ಶಿಕ್ಷೆ ಕೊಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...