ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಹಾಲಿಡೇ ಮಾಡಲು ಬರುವ ಪ್ರವಾಸಿಗರು ಮಾಸ್ಕ್ ಧರಿಸದೇ ಇದ್ದಲ್ಲಿ ವಿಶಿಷ್ಟವಾದ ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ಟೀ ಶರ್ಟ್ ಹಾಗೂ ಶಾರ್ಟ್ ಧರಿಸಿದ್ದ ಪ್ರವಾಸಿಗರಿಬ್ಬರಿಗೆ ಪುಶ್ ಅಪ್ ಮಾಡುವ ಶಿಕ್ಷೆಯನ್ನು ಅಲ್ಲಿನ ಪೊಲೀಸರು ಕೊಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.
ಕೋವಿಡ್-19 ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವ ಕಾರಣ ಕಳೆದ ವರ್ಷದಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ಕಾರಣ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ.
ಮಾಸ್ಕ್ ಹಾಕಿಕೊಳ್ಳದೇ ಅಡ್ಡಾಡುತ್ತಿದ್ದ 70 ಪ್ರವಾಸಿಗರನ್ನು ಹಿಡಿದ ಇಂಡೋನೇಷ್ಯಾ ಪೊಲೀಸರು, ಸುಮಾರು $7 ದಂಡ ವಿಧಿಸಿದ್ದಾರೆ. 30 ಮಂದಿ ತಮ್ಮ ಬಳಿ ದಂಡ ಕಟ್ಟಲು ದುಡ್ಡಿಲ್ಲ ಎಂದ ಕಾರಣ ಅವರಿಗೆ ಪುಶ್‌ಅಪ್ ಮಾಡುವ ಶಿಕ್ಷೆ ಕೊಡಲಾಗಿದೆ.