ಕೊರೊನಾ ವೈರಸ್ ಸೋಂಕಿನಿಂದ ಬಚಾವಾಗಲು ಕಳೆದ ವರ್ಷ ಅಮೆರಿಕದ ಗ್ರಾಹಕರು ಬಳಸಿದ ಕೆಲ ಹ್ಯಾಂಡ್ ಸ್ಯಾನಿಟೈಸರ್ಗಳಲ್ಲಿ ಕ್ಯಾನ್ಸರ್ಗೆ ಕಾರಣವಾಗಬಲ್ಲ ರಾಸಾಯನಿಕಗಳನ್ನ ಬಳಕೆ ಮಾಡಲಾಗಿತ್ತು ಎಂದು ಪರೀಕ್ಷಾ ಸಂಸ್ಥೆಯೊಂದು ಹೇಳಿದೆ.
ನ್ಯೂ ಹೆವೆನ್ನ ವಾಲೈಸರ್ ಪರೀಕ್ಷಾ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ಈ ಹ್ಯಾಂಡ್ ಸ್ಯಾನಿಟೈಸರ್ಗಳಲ್ಲಿ ಬೆಂಜಿನ್ ಅಂಶ ಅತ್ಯಧಿಕವಾಗಿತ್ತು ಎಂದು ಹೇಳಿದೆ. ಅಮೆರಿಕದ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆ ನೀಡಿದ ವರದಿಯ ಪ್ರಕಾರ ಬೆಂಜಿನ್ನ ಅತಿಯಾದ ಬಳಕೆಯಿಂದ ಕ್ಯಾನ್ಸರ್ ಬರುತ್ತದೆ.
168 ಸ್ಯಾನಿಟೈಸರ್ ಬ್ರ್ಯಾಂಡ್ಗಳ 260 ಬಾಟಲಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 17 ಪ್ರತಿಶತ ಮಾದರಿಗಳು ಹೆಚ್ಚಿನ ಮಟ್ಟದ ಬೆಂಜಿನ್ ಅಂಶ ಹೊಂದಿವೆ. ಪ್ರತಿ ಮಿಲಿಯನ್ಗೆ ಎರಡು ಭಾಗಕ್ಕೂ ಹೆಚ್ಚಿನ ಬೆಂಜಿನ್ ಮಿತಿಯನ್ನ ಒಳಗೊಂಡಿರೋದು ಹ್ಯಾಂಡ್ ಸ್ಯಾನಿಟೈಸರ್ಗಳಿಗೆ ಎಫ್ಡಿಎ ವಿಧಿಸಿದ ತಾತ್ಕಾಲಿಕ ಮಿತಿಯಾಗಿತ್ತು.
ಆದರೆ ಹ್ಯಾಂಡ್ ಸ್ಯಾನಿಟೈಸರ್ಗಳನ್ನ ಪರೀಕ್ಷೆ ಮಾಡಿದ ಬಳಿಕ ಇದು ತಾತ್ಕಾಲಿಕ ಮಿತಿಗಿಂತ 8 ಪಟ್ಟು ಹೆಚ್ಚಿದೆ ಎಂದು ತಿಳಿದು ಬಂದಿದೆ. ಬೆಂಜಿನ್ನ ಅತಿಯಾದ ಬಳಕೆಯು ಲ್ಯುಕೆಮಿಯಾದಂತಹ ಭಯಾನಕ ಕಾಯಿಲೆಗೆ ಕಾರಣವಾಗಬಹುದಾಗಿದೆ.