
ಮೇರಿಲ್ಯಾಂಡ್ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನಲ್ಲಿ ಕೂತುಕೊಂಡು ಸ್ಯಾನಿಟೈಸರ್ನಿಂದ ಕೈತೊಳೆದುಕೊಂಡ ತಕ್ಷಣವೇ ಸಿಗರೇಟ್ ಹಚ್ಚಲು ಹೋಗಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ತೆರೆದ ಪಾರ್ಕಿಂಗ್ ಸ್ಥಳದಲ್ಲಿ ಕಾರು ಹೊತ್ತಿ ಉರಿಯುತ್ತಿರೋದನ್ನ ನೀವು ಕಾಣಬಹುದಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ಹತೋಟಿಗೆ ತಂದಿದ್ದಾರೆ. ಹಾಗೂ ಕಾರು ಚಾಲಕ ಸಹ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ವಿಡಿಯೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿರುವ ಮೊಂಟ್ಗೋಮೇರಿ ಕಂಟ್ರಿ ಅಗ್ನಿಶಾಮಕ ದಳದ ವಕ್ತಾರ ಪೆಟೆ ಪಿರಿಂಗರ್, ಕಾರಿಗೆ ಬೆಂಕಿ ; ಚಾಲಕ ಸ್ಯಾನಿಟೈಸರ್ ಹಾಗೂ ಸಿಗರೇಟ್ ಬಳಕೆಯನ್ನ ಒಟ್ಟಾಗಿ ಮಾಡಿದ್ದರಿಂದ ಕಾರಿಗೆ ಬೆಂಕಿ ಬಿದ್ದಿದೆ ಎಂದು ಶೀರ್ಷಿಕೆ ನೀಡಿದ್ದಾರೆ. ಗಾಳಿಯಾಡದಂತಹ ಸ್ಥಳಗಳಲ್ಲಿ ಈ ವಸ್ತುಗಳನ್ನ ಬಳಸೋದು ಅಪಾಯಕಾರಿ ಎಂತಲೂ ಹೇಳಿದ್ದಾರೆ.