ಅಪರೂಪಕ್ಕೆ ಕಾಣಿಸಿಕೊಂಡ ನಿದರ್ಶನವೊಂದರಲ್ಲಿ ಮೊಸಳೆಯೊಂದು ಪುಟಾಣಿ ಮೊಸಳೆಯನ್ನು ತಿಂದು ಹಾಕಲು ಹೊಂಚು ಹಾಕುತ್ತಿರುವ ಕ್ಷಣವನ್ನು ದಕ್ಷಿಣ ಆಫ್ರಿಕಾದಲ್ಲಿ ಸೆರೆ ಹಿಡಿಯಲಾಗಿದೆ.
ನೆದರ್ಲೆಂಡ್ಸ್‌ನ ಛಾಯಾಗ್ರಾಹಕ ಜಾನ್ ಬಟ್ಲರ್ (69) ದಕ್ಷಿಣ ಆಫ್ರಿಕಾದ ಕೃಗರ್ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಟ್ಟ ವೇಳೆ ನೈಲ್ ಮೊಸಳೆಯನ್ನು ಕಂಡಿದ್ದಾರೆ. ಈ ದೈತ್ಯ ಮೊಸಳೆಯು ಪುಟಾಣಿ ಮೊಸಳೆಯೊಂದನ್ನು ಎಳೆದುಕೊಂಡು ನೀರಿನೊಳಗೆ ಹೊತ್ತೊಯ್ದ ಚಿತ್ರಗಳನ್ನು ಆನ್ಲೈನ್‌ನಲ್ಲಿ ಶೇರ್ ಮಾಡಿದ್ದಾರೆ ಬಟ್ಲರ್.
ಈ ಘಟನೆ ನಡೆಯುತ್ತಿದ್ದ ಜಾಗದಿಂದ ಕೇವಲ 100 ಅಡಿ ದೂರದಲ್ಲಿ ಬಟ್ಲರ್ ಇದ್ದರು ಎಂದು ತಿಳಿದುಬಂದಿದೆ. ಉದ್ಯಾನದಲ್ಲಿ ಹಾಗೇ ಛಾಯಾಚಿತ್ರಗಳನ್ನು ಅರಸಿಕೊಂಡು ಹೋಗುತ್ತಿದ್ದ ವನ್ಯಜೀವಿ ಛಾಯಾಗ್ರಾಹಕರ ತಂಡಕ್ಕೆ ನೋಡ ನೋಡುತ್ತಲೇ ಈ ದೃಶ್ಯ ಕಣ್ಣಿಗೆ ಬಿದ್ದಿದೆ. ಕೇವಲ ಒಂದು ನಿಮಿಷದ ಒಳಗೆ ಈ ಬೇಟೆ ಮುಗಿದು ಹೋಗಿದೆ ಎಂದು ಬಟ್ಲರ್ ತಿಳಿಸಿದ್ದಾರೆ.