ವ್ಯಂಗಭರಿತವಾದ ವಿವಾಹ ಆಮಂತ್ರಣ ಪತ್ರವೊಂದು ಅಂತರ್ಜಾಲದಲ್ಲಿ ಬಹಳ ಸದ್ದು ಮಾಡುತ್ತಿದೆ. ಪರೋಡಿ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ಚಿತ್ರವೊಂದು ಸಾಂಕ್ರಮಿತ ವಿದ್ಯಮಾನದ ಕ್ರೂರ ಜೋಕ್ನಂತೆ ಕಾಣುತ್ತಿದೆ.
ಡ್ಯಾನ್ ವ್ಹೈಟ್ ಹೆಸರಿನ ತಮ್ಮ ಮೈಕ್ರೋಬ್ಲಾಗಿಂಗ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಈ ಆಮಂತ್ರಣದಲ್ಲಿ ಮದುವೆ ಆಗಲಿರುವ ಜೋಡಿಯ ಫೋಟೋ ಇದ್ದು, COVID-19 ತೊಲಗಲಿ ಎಂಬ ಸಂದೇಶದೊಂದಿಗೆ ಶರುವಾಗಿದೆ.
“ಮಾಸ್ಕ್ ಗಳಿಗೆ ಪ್ರವೇಶವಿಲ್ಲ! (ಪ್ರತಿಯೊಬ್ಬರ ಸುಂದರ ಬಾಯಿಗಳನ್ನು ನಾವು ನೋಡಬೇಕು) ಕೆಮ್ಮಲೆಂದೇ ಪ್ರತ್ಯೇಕ ಕೋಣೆಯೊಂದನ್ನು ಇಟ್ಟಿದ್ದೇವೆ. ಏನಾದ್ರೂ ಆದ್ರೆ, ಯಾವುದಕ್ಕೂ ಇರಲಿ ಎಂದು ಅಜ್ಜ-ಅಜ್ಜಿಯ ಸಾಕಷ್ಟು ಚಿತ್ರಗಳನ್ನು ಸೆರೆ ಹಿಡಿಯಬೇಕು” ಎಂದು ಸೂಚನೆಗಳನ್ನು ಬರೆಯಲಾಗಿದೆ.
https://twitter.com/steviesburner2/status/1308209457386729472?ref_src=twsrc%5Etfw%7Ctwcamp%5Etweetembed%7Ctwterm%5E1308209457386729472%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fcant-wait-to-cough-together-a-satirical-wedding-invite-saying-no-masks-allowed-divides-twitterati%2F658077
https://twitter.com/my_name_pa/status/1308097795094728704?ref_src=twsrc%5Etfw%7Ctwcamp%5Etweetembed%7Ctwterm%5E1308097795094728704%7Ctwgr%5Eshare_3&ref_url=https%3A%2F%2Fwww.timesnownews.com%2Fthe-buzz%2Farticle%2Fcant-wait-to-cough-together-a-satirical-wedding-invite-saying-no-masks-allowed-divides-twitterati%2F658077