alex Certify ಹೊಸ ಮನೆಗೆ ಬಂದ ಕೂಡಲೇ ಈತನಿಗೆ ಸಿಕ್ಕಿದ್ದು ಆಂಟಿಕ್ ನಿಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಮನೆಗೆ ಬಂದ ಕೂಡಲೇ ಈತನಿಗೆ ಸಿಕ್ಕಿದ್ದು ಆಂಟಿಕ್ ನಿಧಿ

Image result for canadian-youtuber-buys-a-hoarders-house-and-finds-a-treasure-trove-of-valuables-inside

ಹೊಸ ಮನೆಯೊಂದನ್ನು ಖರೀದಿಸಿದ ಕೆನಡಾದ ಯೂಟ್ಯೂಬರ್‌‌ ಅಲೆಕ್ಸ್ ಆಚ್‌ಬೋಲ್ಡ್‌ಗೆ ಭಾರೀ ಅಚ್ಚರಿ ಕಾದಿತ್ತು. ತನ್ನ ಹೊಸ ಮನೆ ತುಂಬೆಲ್ಲಾ ಆಕರ್ಷಕವಾದ ಆಂಟಿಕ್ ವಸ್ತುಗಳು ಸಿಕ್ಕಿರುವ ಅಲೆಕ್ಸ್‌ಗೆ ಭಾರೀ ಖುಷಿಯಾಗಿದೆ.

ಎಡ್ಮಾಂಟನ್‌ನ ನಿವಾಸಿಯಾದ ಅಲೆಕ್ಸ್‌ ಕ್ಯೂರಿಯಾಸಿಟಿ. ಇಂಕ್ ಹೆಸರಿನ ಯೂಟ್ಯೂಬ್ ಚಾನೆಲ್‌ ಒಂದನ್ನು ನಡೆಸುತ್ತಿದ್ದಾರೆ, ವಿಶಿಷ್ಟ ವಸ್ತುಗಳನ್ನು ಈ ಮೂಲಕ ಮಾರಾಟ ಮಾಡುತ್ತಾರೆ.

ಬೆಟ್ಟೆ ಜೋವಾನ್ ಹೆಸರಿನ ಪಿಯಾನೋ ವಾದಕರ ಮನೆಯಲ್ಲಿದ್ದ ಆಕರ್ಷದ ವಾದ್ಯೋಪಕರಣಗಳಿಂದ ಆಕರ್ಷಿತರಾದ ಅಲೆಕ್ಸ್‌ ಆ ಮನೆಯನ್ನು ಖರೀದಿ ಮಾಡಿದ್ದಾರೆ. ಅಲ್ಲಿಗೆ ಶಿಫ್ಟ್ ಆದ ಅಲೆಕ್ಸ್‌ ಕುಟುಂಬಕ್ಕೆ ಈ ವಾದ್ಯೋಪಕರಣಗಳನ್ನೂ ಮೀರಿ ಇನ್ನಷ್ಟು ಅಚ್ಚರಿದಾಯಕ ಆಂಟಿಕ್ ವಸ್ತುಗಳೆಲ್ಲಾ ಸಿಕ್ಕಿವೆ.

ಬಾಯ್ ಫ್ರೆಂಡ್ ಹತ್ಯೆ ಮಾಡಿ ಕೂಲಿ ಕಾರ್ಮಿಕರಿಗೆ ಆಹಾರವಾಗಿ ನೀಡಿದ ಮಹಿಳೆ…!

ನವೆಂಬರ್‌ 2020ರಲ್ಲಿ ನಿಧನರಾದ ಬೆಟ್ಟೆಗೆ ಆಂಟಿಕ್ ವಸ್ತುಗಳ ಸಂಗ್ರಹಣೆಯ ವಿಪರೀತ ಹುಚ್ಚು ಇದ್ದ ಕಾರಣ ಅವರ ಮನೆಯಲ್ಲಿ ಸಿಲ್ವರ್‌ ಬಾರ್‌ಗಳು, ಸಂಗ್ರಹ ಯೋಗ್ಯ ಸುದ್ದಿ ಪತ್ರಿಕೆಗಳು, ವೃತ್ತ ಪತ್ರಿಕೆಗಳು ಸೇರಿದಂತೆ ಅನೇಕ ವಸ್ತುಗಳು ಸಿಕ್ಕಿವೆ.

ನಗದುಭರಿತ ವಾಲೆಟ್‌ಗಳು, 100 ಔನ್ಸ್‌ ಬೆಳ್ಳಿಯ ಬಾರ್‌ ಹಾಗೂ ಚಿನ್ನ & ವಜ್ರದುಂಗುರಗಳಿದ್ದ ಬ್ಯಾಗ್‌ಗಳು ಸಿಕ್ಕಿವೆ ಎಂದು ಅಲೆಕ್ಸ್ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...