ಗ್ರೇಟ್ ಕೆನಡಿಯನ್ ಗೇಮಿಂಗ್ ಫರ್ಮ್ನ ಸಿಇಓ ರೋಡ್ ಬೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾ ಲಸಿಕೆಯ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಕೆನಡಾ ಉತ್ತರ ಭಾಗಕ್ಕೆ ಬೇಕರ್ ದಂಪತಿ ಪ್ರಯಾಣ ಬೆಳೆಸಿ ಕೊರೊನಾ ಲಸಿಕೆ ಪಡೆದ ಹಿನ್ನೆಲೆ ಈ ದಂಡ ತೆರಬೇಕಾಗಿ ಬಂದಿದೆ.
ರೋಡ್ ಬೇಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಅಧಿಕೃತ ಮಾಹಿತಿ ನೀಡಿದೆ. ಅಲ್ಲದೇ ವೈಯಕ್ತಿಕ ವಿಚಾರಗಳ ಬಗ್ಗೆ ಯಾವುದೇ ರೀತಿಯ ಹೇಳಿಕೆಗಳನ್ನ ನೀಡೋದಿಲ್ಲ ಎಂದೂ ಹೇಳಿದೆ.
55 ವರ್ಷದ ಬೇಕರ್ ಹಾಗೂ ಅವರ ಪತ್ನಿ 32 ವರ್ಷದ ಎಕಟೆರಿನಾ ಬೇಕರ್ ಉತ್ತರ ಕೊರಿಯಾದ ಯುಕೋನ್ ಪ್ರಾಂತ್ಯಕ್ಕೆ ಭೇಟಿ ನೀಡಿದ್ದರು. ಅಲ್ಲದೇ ಈ ಪ್ರಾಂತ್ಯದಲ್ಲಿ ತಮ್ಮನ್ನ ತಾವು ಸ್ಥಳೀಯ ಕೆಲಸಗಾರರೆಂದು ಗುರುತಿಸಿಕೊಳ್ಳುವ ಮೂಲಕ ಕೊರೊನಾ ಲಸಿಕೆಯನ್ನ ಪಡೆದಿದ್ದಾರೆ. ಅಲ್ಲದೇ ಯುಕೋನ್ನಿಂದ ವಾಪಸ್ಸಾದ ಬಳಿಕ 14 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗದ ಕಾರಣ ತಲಾ 902.60 ಡಾಲರ್ ಹಣವನ್ನ ದಂಡ ವಿಧಿಸಲಾಗಿದೆ.