ಭಾರತ ತನ್ನ ಸ್ವಾತಂತ್ರ್ಯ ದಿನಾಚರಣೆಯನ್ನ ಆಚರಿಸಲು ಕೆಲವೇ ತಿಂಗಳುಗಳ ಮೊದಲು ಕೆನಡಾದ ಹೋಟೆಲ್ ಡಿ ಗ್ಲೇಸ್ ಎಂಬ ಪ್ರಸಿದ್ಧ ಹೋಟೆಲ್ ಮಹಾತ್ಮ ಗಾಂಧಿಯ ಮಂಜುಗಡ್ಡೆಯ ಪ್ರತಿಮೆಯನ್ನ ನಿರ್ಮಿಸಿದೆ.
ಕ್ವಿಬೆಕ್ ಸಿಟಿಯಲ್ಲಿರುವ ಈ ಪ್ರತಿಮೆಯು 7 ಅಡಿ ಎತ್ತರವಾಗಿದೆ ಹಾಗೂ ಇದನ್ನ ಮಾರ್ಕ್ ಲೆಪೈರ್ ಎಂಬ ಕಲಾವಿದ ನಿರ್ಮಿಸಿದ್ದಾರೆ. ಟೋರಾಂಟೋದಲ್ಲಿರುವ ಭಾರತೀಯ ಕಾನ್ಸುಲೇಟ್ ಈ ಪ್ರತಿಮೆಯ ಫೋಟೋವನ್ನ ಟ್ವಿಟರ್ನಲ್ಲಿ ಶೇರ್ ಮಾಡಿದೆ.
ಪತ್ನಿ ಖಾಸಗಿ ಅಂಗಕ್ಕೆ ಹೊಲಿಗೆ ಹಾಕಿ ವಿಕೃತಿ, ದಾರಿ ತಪ್ಪಿದಳೆಂದು ಪತಿಯಿಂದ ದುಷ್ಕೃತ್ಯ
ಆಜಾದಿ ಕಾ ಮಹೋತ್ಸವ್ ( ಸ್ವಾತಂತ್ರ್ಯದ ಸಂಭ್ರಮ) ಎಂಬ ಹ್ಯಾಶ್ಟ್ಯಾಗ್ನಡಿಯಲ್ಲಿ ಈ ಫೋಟೋ ಶೇರ್ ಮಾಡಲಾಗಿದೆ.
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ, ಕಲಾವಿದ ಲೆಪೈರ್ 9 ಐಸ್ ಬ್ಲಾಕ್ ಗಳನ್ನ ಬಳಸಿ ಈ ಪ್ರತಿಮೆಯನ್ನ 5 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದಾರೆ. ಗಾಂಧೀಜಿ ಪ್ರತಿಮೆಯನ್ನ ನಿರ್ಮಿಸೋದು ನನಗೆ ತುಂಬಾನೇ ರೋಮಾಂಚನ ತಂದಿದೆ ಎಂದು ಲೆಪೈರ್ ಹೇಳಿದ್ದಾರೆ.