alex Certify ಎರಡು ಶರ್ಟ್ ಕದ್ದು 20 ವರ್ಷ ಜೈಲಿನಲ್ಲಿದ್ದವನಿಗೆ ಕೊನೆಗೂ ಬಿಡುಗಡೆಯ ಭಾಗ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ಶರ್ಟ್ ಕದ್ದು 20 ವರ್ಷ ಜೈಲಿನಲ್ಲಿದ್ದವನಿಗೆ ಕೊನೆಗೂ ಬಿಡುಗಡೆಯ ಭಾಗ್ಯ…!

ಎರಡು ಅಂಗಿಗಳನ್ನು ಕದ್ದು 20 ವರ್ಷ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ’ದಿ ಇನೋಸೆನ್ಸ್ ಪ್ರಾಜೆಕ್ಟ್‌ ನ್ಯೂ ಓರ್ಲಿಯನ್ಸ್‌’ ಎಂಬ ಸಂಘಟನೆಯ ಅಭಿಯಾನದಿಂದಾಗಿ ಕೊನೆಗೂ ಬಿಡುಗಡೆಯಾಗಿದ್ದಾನೆ.

ಸೆಪ್ಟೆಂಬರ್‌ 2000ದಲ್ಲಿ $500ಕ್ಕಿಂತ ಕಡಿಮೆ ಬೆಲೆ ಬಾಳುವ ಎರಡು ಅಂಗಿಗಳನ್ನು ಕದ್ದ ಕಾರಣಕ್ಕೆ ಇಷ್ಟು ಸುದೀರ್ಘಾವಧಿ ಶಿಕ್ಷೆಯನ್ನು ಗಯ್ ಫ್ರಾಂಕ್ ಎಂಬ 67 ವರ್ಷದ ಈ ವ್ಯಕ್ತಿಗೆ ವಿಧಿಸಲಾಗಿತ್ತು ಎಂದು ಮೇಲ್ ಆನ್ಲೈನ್ ವರದಿಯಲ್ಲಿ ತಿಳಿಸಲಾಗಿದೆ.

ʼಸೆಲ್ಫಿʼ ತೆಗೆದುಕೊಳ್ಳಲು ಹೋದ ಬಾಲಕನಿಗೆ ಕರೆಂಟ್​ ಶಾಕ್

ಈತನಿಗೆ 23 ವರ್ಷಗಳ ಸುದೀರ್ಘಾವಧಿಗೆ ಶಿಕ್ಷೆ ವಿಧಿಸಲಾಗಿತ್ತು. ಪದೇ ಪದೇ ತಪ್ಪು ಮಾಡುವ ಮಂದಿಗೆ ಲೌಸಿಯಾನಾದ ಕಾನೂನು ಕಠಿಣ ಶಿಕ್ಷೆಯ ಸಾಧ್ಯತೆಗಳನ್ನು ಇಟ್ಟಿರುವ ಕಾರಣ ರಾಜ್ಯದಲ್ಲಿ ಜನಾಂಗೀಯ ದ್ವೇಷ ಹಾಗೂ ಹಿಂಸಾಚಾರ ಹೆಚ್ಚೇ ಆಗಿದೆ ಎಂಬ ದೂರುಗಳು ಬಲವಾಗಿ ಕೇಳಿ ಬರುತ್ತಿವೆ.

2000 ದಲ್ಲಿ ಬಂಧನವಾಗುವ ಮುನ್ನ ಫ್ರಾಂಕ್‌ 36 ಬಾರಿ ಬಂಧಿತನಾಗಿ, ಮೂರು ಬಾರಿ ತಪ್ಪಿತಸ್ಥ ಎಂದು ಸಾಬೀತಾಗಿತ್ತು.

ಈತನಿಗೆ ಕೊಟ್ಟಿರುವ ಶಿಕ್ಷೆಯ ಪ್ರಮಾಣ ತೀರಾ ಅನ್ಯಾಯವೆಂದು ಫ್ರಾಂಕ್‌ ಪರವಾಗಿ ಅಭಿಯಾನಕ್ಕಿಳಿದ ದಿ ಇನೋಸೆನ್ಸ್ ನ್ಯೂ ಓರ್ಲಿಯನ್ಸ್‌, ಆತನನ್ನ ಕೊನೆಗೂ ಬಿಡುಗಡೆ ಮಾಡಿಸುವಲ್ಲಿ ಸಫಲವಾಗಿದೆ.

“ಈ ವಿಪರೀತ ಶಿಕ್ಷೆಗಳ ಕಾರಣದಿಂದ ಕಪ್ಪು ವರ್ಣೀಯರು ಹೇಗೆಲ್ಲಾ ತಾರತಮ್ಯ ಎದುರಿಸುತ್ತಾರೆ ಎಂದು ಇದು ತೋರುತ್ತದೆ. ಸಂಪನ್ಮೂಲಶೀಲ ಬಿಳಿಯ ವ್ಯಕ್ತಿಗಳಿಗೆ ಹೀಗೆಲ್ಲಾ ಶಿಕ್ಷೆ ಆಗುವುದನ್ನು ಊಹಿಸುವುದೂ ಕಷ್ಟ” ಎಂದು ಸಂಘಟನೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...