alex Certify ತನ್ನ DL ನಲ್ಲಿದ್ದ ಫೋಟೋ ಕಂಡ ಯುವತಿಗೆ ʼಶಾಕ್​ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ DL ನಲ್ಲಿದ್ದ ಫೋಟೋ ಕಂಡ ಯುವತಿಗೆ ʼಶಾಕ್​ʼ

ಕ್ಯಾಲಿಫೋರ್ನಿಯಾದ 25 ವರ್ಷದ ಯುವತಿ ಲೆಸ್ಲೆ ಪಿಲ್​ಗ್ರಿಮ್​ ಎಂಬವರು ಕೆಲ ದಿನಗಳ ಹಿಂದಷ್ಟೇ ವಾಹನ ಪರವಾನಿಗಿ ನವೀಕರಣ ಮಾಡಲಿಕ್ಕೋಸ್ಕರ ಡಿಎಂವಿ ಕಚೇರಿಗೆ ಭೇಟಿ ನೀಡಿದ್ದರು. ಕೊರೊನಾದಿಂದಾಗಿ ಮಾಸ್ಕ್​ ಬಳಕೆ ಕಡ್ಡಾಯವಾಗಿದ್ದರಿಂದ ಫೋಟೋ ಕ್ಲಿಕ್ಕಿಸುವ ವೇಳೆ ಕೂಡ ಲೆಸ್ಲೆ ಮಾಸ್ಕ್​ನ್ನು ತೆಗೆದಿರಲಿಲ್ಲ. ಇದೀಗ ವಾಹನ ಪರವಾನಿಗಿ ಕಾರ್ಡ್​ನಲ್ಲಿ ಆಕೆ ಮಾಸ್ಕ್​ ಹಾಕಿಕೊಂಡಿರುವ ಫೋಟೋವನ್ನೇ ಲಗತ್ತಿಸಲಾಗಿದೆ.

ವಾಹನ ಪರವಾನಿಗಿ ನವೀಕರಿಸುವ ಸಲುವಾಗಿ ಆಕೆಯನ್ನ ಕರೆದ ಫೋಟೋಗ್ರಾಫರ್​ ಫೋಟೋ ತೆಗೆಯುವ ಮುನ್ನ ಮಾಸ್ಕ್​ ತೆಗೆಯುವಂತೆ ಹೇಳಿರಲಿಲ್ಲ. ಆದರೆ ಬಳಿಕ ಆಕೆ ಮಾಸ್ಕ್​ ತೆಗೆದು ಕೂಡ ಫೋಟೋ ಕ್ಲಿಕ್ಕಿಸಿಕೊಂಡಿದ್ದಳು. ಆದರೆ ವಾಹನ ಪರವಾನಿಗಿ ಕಾರ್ಡ್​ನಲ್ಲಿ ಮಾತ್ರ ಆಕೆ ಮಾಸ್ಕ್​​ ಹಾಕಿಕೊಂಡಿರುವ ಫೋಟೋವನ್ನೇ ಹಾಕಿದ್ದಾರೆ.

ಈ ವಿಚಿತ್ರ ವಾಹನ ಪರವಾನಿಗಿಯನ್ನ ಕಂಡು ಗೊಂದಲಕ್ಕೀಡಾದ ಲೆಸ್ಲೆ ತನ್ನ ಸ್ನೇಹಿತರು ಹಾಗೂ ವಕೀಲನಾಗಿರುವ ತನ್ನ ತಂದೆಯ ಬಳಿ ಮುಖ ಕಾಣದ ಫೋಟೊ ಇರುವ ಡಿಎಲ್​ ಮಾನ್ಯವೇ ಎಂದು ಪ್ರಶ್ನೆ ಮಾಡಿದ್ದಾಳೆ. ಇವರೆಲ್ಲ ಈ ವಿಚಿತ್ರ ವಾಹನ ಪರವಾನಿಗಿಯನ್ನ ಕಂಡು ನಕ್ಕಿದ್ದಾರೆ ಎಂದು ಲೆಸ್ಲೆ ತಮ್ಮ ಅನುಭವವನ್ನ ಶೇರ್​ ಮಾಡಿದ್ದಾಳೆ. ಆಕೆಯ ತಂದೆ ಫೇಸ್​ಬುಕ್​ನಲ್ಲಿ ಈ ವಿಚಾರವನ್ನ ಹಂಚಿಕೊಂಡಿದ್ದಾರೆ. ಹಾಗೂ ಈ ಪೋಸ್ಟ್ ಸಖತ್​ ವೈರಲ್​ ಆಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...