ಕರುವಿಗಿರುವ ಕಾಲಿನ ಸಂಖ್ಯೆ ನೋಡಿ ನೆಟ್ಟಿಗರು ಶಾಕ್…! 25-02-2021 8:12AM IST / No Comments / Posted In: Latest News, International ಎರಡು ಹೆಚ್ಚುವರಿ ಕಾಲುಗಳ ಜೊತೆ ಜನಿಸಿದ ಕರುವೊಂದು ತನ್ನ ವಿಲಕ್ಷಣ ದೇಹದ ವಿರುದ್ಧ ಹೋರಾಡುತ್ತಾ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ಕೊನೆಗೂ ತನಗೊಂದು ಶಾಶ್ವತ ಸೂರನ್ನ ಹುಡುಕಿಕೊಂಡಿದೆ. ಕರುವಿನ ಭುಜದ ಮೇಲೆ ಎರಡು ಹೆಚ್ಚುವರಿ ಕಾಲುಗಳಿದ್ದು ಏಂಜೆಲ್ನ ರೆಕ್ಕೆಗಳಂತೆ ಕಾಣುತ್ತಿದೆ. ನಟ್ ಹೌಸ್ ಎಂಬ ಪ್ರಾಣಿ ರಕ್ಷಣಾ ಸಂಸ್ಥೆ ಕರುವನ್ನ ದತ್ತು ಪಡೆದಿದೆ. ರೈತನನ್ನ ಸಂಪರ್ಕಿಸಿದ ಈ ಪ್ರಾಣಿ ದಯಾ ಸಂಘ ಈ ವಿಶೇಷವಾದ ಕರುವನ್ನ ದತ್ತು ಪಡೆದಿದ್ದಾರೆ. ಈತ ನಮ್ಮ ಪರಿವಾರದಲ್ಲೇ ಅತಿ ಚಿಕ್ಕ ಸದಸ್ಯ. ಅದರ 2 ಹೆಚ್ಚುವರಿ ಪುಟ್ಟ ಕಾಲುಗಳನ್ನ ತೆಗೆದುಹಾಕಬಹುದು. ಆದರೆ ಇನ್ನೊಂದು ದೊಡ್ಡ ಕಾಲು ಕರುವಿನ ಬೆನ್ನು ಮೂಳೆ ಜೊತೆ ಸಂಪರ್ಕ ಹೊಂದಿದೆ. ಹೀಗಾಗಿ ಅದನ್ನ ತೆಗೆಯೋದು ಅಪಾಯಕಾರಿ ಎಂದು ಹೇಳಿದ್ದಾರೆ ಅಂತಾ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದೆ.