ಗಿನ್ನೆಸ್ ದಾಖಲೆಯಲ್ಲಿ ಹೆಸರನ್ನ ಬರೆಸಿಕೊಳ್ಳಬೇಕು ಅಂತಾ ಕೆಲವರು ಮಾಡುವ ಸಾಹಸಗಳನ್ನ ನೋಡಿದ್ರೆ ಸಾಕು ಮೈ ಝುಂ ಎನ್ನುತ್ತೆ. ಇದೀಗ ಇಂತಹದ್ದೇ ಒಂದು ವಿಚಿತ್ರ ಗಿನ್ನೆಸ್ ದಾಖಲೆಯ ವಿಡಿಯೋವನ್ನ ಗಿನ್ನೆಸ್ ವಿಶ್ವ ದಾಖಲೆ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಲಾಗಿದೆ. 2016ರಲ್ಲಿ ಜೇನುನೊಣಗಳ ಜೊತೆ ಇದ್ದ ಚೀನಾದ ರುವಾನ್ ಲಿಯಾಂಗ್ಮಿಂಗ್ ಎಂಬಾತ ಈ ವಿಚಿತ್ರ ವಿಶ್ವ ದಾಖಲೆ ಬರೆದಿದ್ದ.
ಒಟ್ಟು 6.37,000 ಜೇನುನೊಣಗಳನ್ನ ಮೈಮೇಲೆ ಇಟ್ಟುಕೊಳ್ಳುವ ಮೂಲಕ ಲಿಯಾಂಗ್ಮಿಂಗ್ ವಿಶ್ವ ದಾಖಲೆಯ ಪುಟದಲ್ಲಿ ತನ್ನ ಹೆಸರನ್ನ ಬರೆಯಿಸಿಕೊಂಡಿದ್ದ. ಈ ಒಟ್ಟು ಜೇನುನೋಣಗಳ ಸಂಖ್ಯೆಯಲ್ಲಿ 60 ರಾಣಿ ಜೇನುಗಳಾಗಿವೆ. ಇನ್ನು ತನ್ನ ಈ ಸಾಧನೆ ಬಗ್ಗೆ ಮಾತನಾಡಿದ್ದ ಲಿಯಾಂಗ್ಮಿಂಗ್ ಜೇನುನೋಣಗಳ ಜೊತೆ ಇರುವಾಗ ನೀವು ಆದಷ್ಟು ಶಾಂತರಾಗಿ ಇರಬೇಕು.
ನಮಗೆ ಕಚ್ಚಿದ ಕೂಡಲೇ ಆ ಜೇನುನೊಣಗಳು ಸಾಯುತ್ತವೆ. ನೀವು ಸುಮ್ಮನೇ ಇದ್ದರೆ ಅವು ಸುಮ್ಮನಿರುತ್ತವೆ. ಆದರೆ ಸಾಧನೆಗಿಂತ ಜೀವನ ಮುಖ್ಯ. ಹೀಗಾಗಿ ಇಂತಹ ಕಠಿಣ ಸವಾಲುಗಳನ್ನ ಎಂದಿಗೂ ಲಘುವಾಗಿ ಸ್ವೀಕರಿಸದಿರಿ ಅಂತಾ ಕಿವಿಮಾತನ್ನೂ ಹೇಳಿದ್ದರು.
https://www.facebook.com/watch/?v=349762899589086&t=168