ಮ್ಯಾಂಚೆಸ್ಟರ್ ನಗರದ ಬಸ್ ಒಂದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಕುತ್ತಿಗೆ ಸುತ್ತಲೂ ಹೆಬ್ಬಾವನ್ನು ಮಾಸ್ಕ್ ರೂಪದಲ್ಲಿ ಧರಿಸಿಕೊಂಡಿರುವುದು ಕಂಡುಬಂದಿದೆ.
46 ವರ್ಷ ವಯಸ್ಸಿನ ಈ ವ್ಯಕ್ತಿ ಇಲ್ಲಿನ ಸ್ಯಾಲ್ಫೋರ್ಡ್ನಲ್ಲಿ ಸ್ವಿಂಟನ್ ಬಸ್ಸನ್ನೇರಿದ್ದಾರೆ. ಕೊರೋನಾ ವೈರಸ್ನಿಂದ ರಕ್ಷಣೆಗೆ ಆತ ಮಾಡಿಕೊಂಡಿದ್ದ ವ್ಯವಸ್ಥೆಯನ್ನು ಕಂಡ ಸಹ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ.
ಇದನ್ನು ಕಂಡ ಮಹಿಳೆಯೊಬ್ಬರು ಮೊದಲಿಗೆ ಆ ಹಾವನ್ನು ಒಂದು ’ಫಂಕೀ ಮಾಸ್ಕ್’ ಎಂದುಕೊಂಡಿದ್ದರು. ಆದರೆ ಹಾವಿನ ಚಲನೆ ಕಂಡ ಬಳಿಕ ಅವರು ದಂಗು ಬಡಿದಂತೆ ಆಗಿಬಿಟ್ಟಿದ್ದಾರೆ. ಹೆಬ್ಬಾವಿನಿಂದ ಬಸ್ಸಿನಲ್ಲಿದ್ದ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ.