alex Certify ಪೊಲೀಸ್​ ಠಾಣೆಗೆ ತಾನಾಗೇ ಕರೆ ಮಾಡಿ ಸಿಕ್ಕಿಬಿದ್ದ ಕಳ್ಳ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್​ ಠಾಣೆಗೆ ತಾನಾಗೇ ಕರೆ ಮಾಡಿ ಸಿಕ್ಕಿಬಿದ್ದ ಕಳ್ಳ..!

ಕಳ್ಳರು ಅಂಗಡಿಯನ್ನೋ ಮನೆಯನ್ನೋ ಲೂಟಿ ಮಾಡಿ ಪರಾರಿಯಾದ ಮೇಲೆ ಪೊಲೀಸರಿಗೆ ಈ ಬಗ್ಗೆ ಸಂತ್ರಸ್ತರು ದೂರು ನೀಡೋದು ಸಾಮಾನ್ಯ ವಿಚಾರ. ಆದರೆ ಬ್ರಿಟನ್​ನಲ್ಲಿ ಇಬ್ಬರು ಕಳ್ಳರು ತಾವೇ ತಪ್ಪಾಗಿ ತುರ್ತು ನಂಬರ್​ ಕರೆ ಮಾಡುವ ಮೂಲಕ ಬಂಧನಕ್ಕೊಳಗಾಗಿದ್ದಾರೆ.

ಈ ವಿಚಿತ್ರ ಘಟನೆ ಬ್ರಿಟನ್​ ಸ್ಟಾಫರ್ಡ್ಶೈರ್ ನ ಸ್ಟೋಕ್-ಆನ್-ಟ್ರೆಂಟ್ನ ಮಿಡಲ್ಪೋರ್ಟ್ ಪ್ರದೇಶದಲ್ಲಿ ಬುಧವಾರ ಸಂಜೆ ನಡೆದಿದೆ.

ಕರೆಯನ್ನ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು 49 ಹಾಗೂ 42ರ ವಯಸ್ಸಿನ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ದರೋಡೆಕೋರರೇ ತಮ್ಮ ಸಂಭಾಷಣೆಯನ್ನ ಕೇಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು. ಇಬ್ಬರನ್ನೂ ಮಾರನೇ ದಿನದವರೆಗೆ ಬಂಧನದಲ್ಲಿ ಇಡಲಾಗಿತ್ತು.

ಜಾನ್​ ಓವನ್​ ಎಂಬ ಪೊಲೀಸ್​ ಅಧಿಕಾರಿ ಈ ಜೋಡಿ ಕಳ್ಳರು ವಿಶ್ವದ ದುರದೃಷ್ಟಕರ ಕಳ್ಳರು ಎಂದು ಸಾಮಾಜಿಕ ಜಾಲತಾಣದಲ್ಲಿ ಉಲ್ಲೇಖಿಸಿದ್ದಾರೆ.

— CI John Owen (@CIJohnOwen) January 6, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...