
ತನ್ನ ತೋಳುಗಳನ್ನು ಬಳಸಿ ಚಪ್ಪಾಳೆ ಹೊಡೆಯಬಲ್ಲ ಇಂಡಿಯಾನಾದ ನಿವಾಸಿ ಕೋರೆ ಬೆನ್ನೆಟ್ ಎಂಬ ಹುಡುಗ ಸುದ್ದಿಯಲ್ಲಿದ್ದಾನೆ. ಅಪರೂಪದ ದೈಹಿಕ ಸವಾಲು ಎದುರಿಸುತ್ತಿರುವ ಈತನಿಗೆ ಹಲ್ಲುಗಳು ಹಾಗೂ ಎಲುಬುಗಳ ಬೆಳವಣಿಗೆ ಸರಿಯಾಗಿ ಆಗಿಲ್ಲ.
ಇದೀಗ ತನ್ನ ಸವಾಲನ್ನೇ ಅವಕಾಶವನ್ನಾಗಿ ಮಾಡಿಕೊಂಡಿರುವ ಈ ಬಾಲಕ, ತೋಳುಗಳನ್ನು ಬಳಸಿ ಚಪ್ಪಾಳೆ ಹೊಡೆದು, ಜನರು ಹುಬ್ಬೇರಿಸುವ ಸ್ಟಂಟ್‌ಗಳನ್ನೂ ಮಾಡಿ ಸಂಚಲನ ಸೃಷ್ಟಿಸಿದ್ದಾನೆ.
ಕ್ಲೈಡೋಕ್ರೇನಿಯಲ್ ಡಿಸ್ಪ್ಲೇಸಿಯಾ ಎಂಬ ಅಪರೂಪದ ವಂಶವಾಹಿ ಸಮಸ್ಯೆಯಿಂದ ಬಳಲುತ್ತಿರುವ ಈ ಬಾಲಕನಿಗೆ ಕಾಲರ್ ಎಲುಬುಗಳು ಇಲ್ಲ.
ಪತ್ನಿಯ ಗುಪ್ತಾಂಗದೊಳಕ್ಕೆ ಮದ್ಯದ ಬಾಟಲಿ ತೂರಿದ ಪಾಪಿ ಪತಿ..!
“ಕುಳ್ಳಗಿದ್ದು, ಕೆಟ್ಟ ಹಲ್ಲುಗಳು ಹಾಗೂ ದೊಡ್ಡ ತಲೆ ಹೊಂದಿರುವ ಕಾರಣಕ್ಕೆ ನನ್ನನ್ನು ಆಡಿಕೊಳ್ಳಲಾಗುತ್ತಿತ್ತು. ಈ ಪರಿಸ್ಥಿತಿಯನ್ನು ನಾನು ಪ್ರೀತಿಸುತ್ತಿದ್ದು, ಇದು ನಿಜಕ್ಕೂ ಚೆನ್ನಾಗಿದೆ – ಕ್ಲೈಡೋಕ್ರೇನಿಯಲ್ ಡಿಸ್ಪ್ಲೇಸಿಯಾ ಸಮಸ್ಯೆಯ ನಡುವೆಯೂ ನಾನು ಎಲ್ಲವನ್ನೂ ಮಾಡಬಲ್ಲೆ,” ಎಂದು ಆತ್ಮವಿಶ್ವಾಸದ ನಗೆ ಬೀರುತ್ತಾನೆ ಬೆನ್ನೆಟ್.
ಸಾಮಾಜಿಕ ಜಾಲತಾಣದಲ್ಲಿ ತನ್ನ ಸ್ಟಂಟ್‌ಗಳನ್ನು ತೋರುವುದಲ್ಲದೇ ಆಂಗಿಕ ರಚನೆಯಲ್ಲಾಗುವ ವ್ಯತ್ಯಯಗಳ ಕುರಿತು ಜನರಿಗೆ ಅರಿವು ಮೂಡಿಸುತ್ತಿದ್ದಾನೆ ಬೆನ್ನೆಟ್.