alex Certify ಈ ಗಟ್ಟಿ ಜೀವದ ಕತೆ ಕೇಳಿದರೆ ಅಚ್ಚರಿಪಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗಟ್ಟಿ ಜೀವದ ಕತೆ ಕೇಳಿದರೆ ಅಚ್ಚರಿಪಡ್ತೀರಿ…!

ಬ್ರಿಟನ್: ಬ್ರಿಟನ್ ಶತಾಯುಷಿ ಮಹಿಳೆಯ ಸಾಹಸದ ಕತೆ ಕೇಳಿದರೆ ಮೈ ರೋಮಾಂಚನ ಹಾಗೂ ಅಚ್ಚರಿಯಾಗುವುದು ಖಂಡಿತ.‌ ವಿಮಾನ ಅಪಘಾತ, ನಾಝಿ ದಾಳಿ, ಕ್ಯಾನ್ಸರ್ ಹಾಗೂ ಈಗ ಕೋವಿಡ್ ಎದುರಿಸಿ, ನಾಲ್ಕನೇ ಬಾರಿ ಸಾವಿನ ಅತಿ ಹತ್ತಿರ ಹೋಗಿ ಗೆದ್ದು ಬಂದ ಆಕೆಯದ್ದು ನಿಜವಾಗಿ ಗಟ್ಟಿ ಜೀವ.

1920 ರಲ್ಲಿ ಲಂಡನ್ ನಲ್ಲಿ ಜನಿಸಿದ ಜೊಯ್ ಆ್ಯಂಡ್ರೂ ಎಂಬ ಮಹಿಳೆ ಆಕ್ಸಿಲರಿ ಏರ್ ಫೋರ್ಸ್ ನಲ್ಲಿ ಸಾರ್ಜಂಟ್ ಆಗಿ ಸೇರುತ್ತಾಳೆ. 2 ನೇ ಮಹಾ ಯುದ್ಧದಲ್ಲಿ ಆಕೆ ಬಾಂಬರ್ ಆಗಿ ಕೆಲಸ ಮಾಡಿದ್ದರು. ಯುದ್ಧದ ಸಂದರ್ಭದಲ್ಲಿ ಜರ್ಮನಿಯಲ್ಲಿ ವಾಹನ ಚಾಲಕಿಯಾಗಿ ಕರ್ತವ್ಯ ನಿರ್ವಹಿಸಬೇಕಾಗಿ ಬರುತ್ತದೆ. ಆ ಸಂದರ್ಭದಲ್ಲಿ ಆಕೆ ಚಲಾಯಿಸುತ್ತಿದ್ದ ವಾಹನದ ಮೇಲೆ ಒಮ್ಮೆ ನಾಝಿಗಳಿಂದ ದಾಳಿ ನಡೆದಿತ್ತು. ಇಂಚಿಂಚಿನಲ್ಲಿ ಆ್ಯಂಡ್ರೂ ಬಚಾವಾಗಿದ್ದಳು.

2 ನೇ ಮಹಾಯುದ್ಧ ಮುಗಿದ ನಂತರ ಆ್ಯಂಡ್ರೂ ಬ್ರಿಟಿಷ್ ಒವರ್ ಸೀಸ್ ಏರ್ವೇಸ್ ನ ಮೊದಲ ಮಹಿಳಾ ಏರ್ ಹೋಸ್ಟೆಸ್ ಆಗಿ ಸೇರಿಕೊಳ್ಳುತ್ತಾರೆ. ಒಮ್ಮೆ ಆಕೆ ಇದ್ದ ವಿಮಾನ ಇಂಧನ ಖಾಲಿಯಾಗಿ ಅಪಘಾತವಾಗಿತ್ತು. ಒಬ್ಬ ಸಿಬ್ಬಂದಿ ಮೃತಪಪಟ್ಟಿದ್ದರು. ಆ್ಯಂಡ್ರೂ ಹಾಗೂ ಇತರ ಪ್ರಯಾಣಿಕರು ಬಚಾವಾಗಿದ್ದರು.

ನಿವೃತ್ತಿಯ ನಂತರ ಆಕೆಗೆ ಸ್ತನ ಕ್ಯಾನ್ಸರ್ ಕಾಡಿತ್ತು. ಅದರಿಂದ ಬದುಕಿ ಬಂದ ಆಕೆಗೆ 99 ನೇ ವಯಸ್ಸಿನಲ್ಲಿ ಕೋವಿಡ್ ಕೂಡ ಉಂಟಾಯಿತು. ಅದರಿಂದಲೂ ಗೆದ್ದು ಬಂದ ಮಹಿಳೆ ಇತ್ತೀಚೆಗೆ 100 ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...