ಬ್ರಿಟಿಷ್ ಏರ್ವೇಸ್ ತಮ್ಮ ಫ್ಲೈಟ್ ಅಟೆಂಡೆಂಟ್ಗಳಲ್ಲಿ ಒಬ್ಬರು ಕೆಟ್ಟ ಕೆಲಸ ಮಾಡುವ ಮೂಲಕ ವಿಮಾನಯಾನದ ವೇಳೆ ವಯಸ್ಕ ಮನರಂಜನೆ ನೀಡುತ್ತಿದ್ದಾರೆ ಎಂಬ ಆರೋಪ ಸಂಬಂಧ ತನಿಖೆ ಶುರು ಮಾಡಿದೆ.
ಇಷ್ಟು ಮಾತ್ರವಲ್ಲದೇ ಆ ಅಟೆಂಡೆಂಟ್ ತನ್ನ ಒಳ ಉಡುಪಗಳನ್ನೂ ಪ್ರಯಾಣಿಕರಿಗೆ ಮಾರಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬ್ರಿಟಿಷ್ ಏರ್ವೇಸ್ ಈ ಸಿಬ್ಬಂದಿಯನ್ನ ಗುರುತಿಸೋಕೆ ಮುಂದಾಗಿದೆ.
ವರದಿಗಳ ಪ್ರಕಾರ ಆಕೆ ಅಶ್ಲೀಲ ಫೋಟೋಗಳನ್ನ ಸಾಮಾಜಿಕ ಮಾಧ್ಯಮಗಳಲ್ಲೂ ಹರಿಬಿಡ್ತಿದ್ದಾಳೆ ಎನ್ನಲಾಗುತ್ತಿದೆ. ಅಲ್ಲದೇ ಆಕೆ ವಿಮಾನಯಾನ ಸಂದರ್ಭದಲ್ಲಿ ತಾನು ಒಳಉಡುಪನ್ನ ಧರಿಸಲ್ಲ ಎಂದೆಲ್ಲ ಅಸಹ್ಯವಾಗಿ ಕೀಟಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಇನ್ನು ಈ ಆರೋಪಗಳ ಸಂಬಂಧ ಮಾತನಾಡಿದ ಬ್ರಿಟಿಷ್ ಏರ್ವೇಸ್ ವಕ್ತಾರ, ನಮ್ಮ ಎಲ್ಲ ಸಿಬ್ಬಂದಿಯಿಂದ ಎಲ್ಲ ಸಮಯದಲ್ಲಿ ಉತ್ತಮ ನಡವಳಿಕೆಯನ್ನ ನಿರಿಕ್ಷೀಸುತ್ತೇವೆ. ಹಾಗೂ ಈ ಆರೋಪದ ವಿರುದ್ಧ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಮಾಹಿತಿ ಪ್ರಕಾರ ಆಕೆ ತನ್ನ ಒಳ ಉಡುಪುಗಳನ್ನ 2741 ರೂಪಾಯಿಗೆ ಮಾರಾಟ ಮಾಡುತ್ತಿದ್ದಾಳೆ. ಆಕೆಯನ್ನ ಹೋಟೆಲ್ನಲ್ಲಿ ಭೇಟಿಯಾದರೆ ಆಕೆಯ ಶುಲ್ಕ ಹೆಚ್ಚಾಗುತ್ತೆ ಎಂದೆಲ್ಲ ಹೇಳಿಕೊಂಡಿದ್ದಾಳಂತೆ.