alex Certify ವಿಮಾನ ಹಾರಾಟದ ವೇಳೆ ಸಿಬ್ಬಂದಿಯಿಂದ ಅಶ್ಲೀಲ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಹಾರಾಟದ ವೇಳೆ ಸಿಬ್ಬಂದಿಯಿಂದ ಅಶ್ಲೀಲ ಕೆಲಸ

ಬ್ರಿಟಿಷ್ ಏರ್​ವೇಸ್​​ ತಮ್ಮ ಫ್ಲೈಟ್​ ಅಟೆಂಡೆಂಟ್​ಗಳಲ್ಲಿ ಒಬ್ಬರು ಕೆಟ್ಟ ಕೆಲಸ ಮಾಡುವ ಮೂಲಕ ವಿಮಾನಯಾನದ ವೇಳೆ ವಯಸ್ಕ ಮನರಂಜನೆ ನೀಡುತ್ತಿದ್ದಾರೆ ಎಂಬ ಆರೋಪ ಸಂಬಂಧ ತನಿಖೆ ಶುರು ಮಾಡಿದೆ.

ಇಷ್ಟು ಮಾತ್ರವಲ್ಲದೇ ಆ ಅಟೆಂಡೆಂಟ್​ ತನ್ನ ಒಳ ಉಡುಪಗಳನ್ನೂ ಪ್ರಯಾಣಿಕರಿಗೆ ಮಾರಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬ್ರಿಟಿಷ್ ಏರ್​ವೇಸ್​ ಈ ಸಿಬ್ಬಂದಿಯನ್ನ ಗುರುತಿಸೋಕೆ ಮುಂದಾಗಿದೆ.

ವರದಿಗಳ ಪ್ರಕಾರ ಆಕೆ ಅಶ್ಲೀಲ ಫೋಟೋಗಳನ್ನ ಸಾಮಾಜಿಕ ಮಾಧ್ಯಮಗಳಲ್ಲೂ ಹರಿಬಿಡ್ತಿದ್ದಾಳೆ ಎನ್ನಲಾಗುತ್ತಿದೆ. ಅಲ್ಲದೇ ಆಕೆ ವಿಮಾನಯಾನ ಸಂದರ್ಭದಲ್ಲಿ ತಾನು ಒಳಉಡುಪನ್ನ ಧರಿಸಲ್ಲ ಎಂದೆಲ್ಲ ಅಸಹ್ಯವಾಗಿ ಕೀಟಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಇನ್ನು ಈ ಆರೋಪಗಳ ಸಂಬಂಧ ಮಾತನಾಡಿದ ಬ್ರಿಟಿಷ್ ಏರ್​ವೇಸ್​ ವಕ್ತಾರ, ನಮ್ಮ ಎಲ್ಲ ಸಿಬ್ಬಂದಿಯಿಂದ ಎಲ್ಲ ಸಮಯದಲ್ಲಿ ಉತ್ತಮ ನಡವಳಿಕೆಯನ್ನ ನಿರಿಕ್ಷೀಸುತ್ತೇವೆ. ಹಾಗೂ ಈ ಆರೋಪದ ವಿರುದ್ಧ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಮಾಹಿತಿ ಪ್ರಕಾರ ಆಕೆ ತನ್ನ ಒಳ ಉಡುಪುಗಳನ್ನ 2741 ರೂಪಾಯಿಗೆ ಮಾರಾಟ ಮಾಡುತ್ತಿದ್ದಾಳೆ. ಆಕೆಯನ್ನ ಹೋಟೆಲ್​ನಲ್ಲಿ ಭೇಟಿಯಾದರೆ ಆಕೆಯ ಶುಲ್ಕ ಹೆಚ್ಚಾಗುತ್ತೆ ಎಂದೆಲ್ಲ ಹೇಳಿಕೊಂಡಿದ್ದಾಳಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...