ತನ್ನ ಮಗುವಿನ ಜನನ ಪ್ರಮಾಣ ಪತ್ರದಲ್ಲಿ ತಾಯಿಯ ಜಾಗದಲ್ಲಿ ತಂದೆಯ ಹೆಸರನ್ನ ನಮೂದಿಸಲು ಕೋರಿದ್ದ ಬ್ರಿಟಿಷ್ ತೃತೀಯ ಲಿಂಗಿಯ ಕೋರಿಕೆಯನ್ನ ಅಲ್ಲಿನ ಉಚ್ಚ ನ್ಯಾಯಾಲಯ ತಿರಸ್ಕರಿಸಿದೆ.
ಫ್ರೆಡ್ಡಿ ಮೆಕ್ಕಾನ್ನೆಲ್ 22 ವರ್ಷ ವಯಸ್ಸಿನವನಾಗಿದ್ದಾಗ ಅವರ ಪಾಸ್ಪೋರ್ಟ್ ಹಾಗೂ ಆರೋಗ್ಯ ದಾಖಲೆಗಳಲ್ಲಿ ಪುರುಷ ಎಂದು ಲಿಂಗವನ್ನ ಬದಲಾಯಿಸಿಕೊಂಡಿದ್ದರು.
ಕೆಳ ನ್ಯಾಯಾಲಯದ ವಿರುದ್ಧ ತೀರ್ಪನ್ನ ನೀಡಲು ನಿರಾಕರಿಸಿದ ಬ್ರಿಟನ್ ಸರ್ವೋಚ್ಚ ನ್ಯಾಯಾಲಯ ಪ್ರತಿ ಮಗು ತಾಯಿಯನ್ನ ಹೊಂದಿರಬೇಕು ಹಾಗೂ ತಾಯಿ ಯಾರೆಂದು ತಿಳಿಯಲು ಮಗುವಿಗೆ ಅಧಿಕಾರವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೇ ಈ ಅರ್ಜಿಯು ಕಾನೂನಿನ ಯೋಗ್ಯವಾದ ಅಂಶವನ್ನ ಹೊಂದಿಲ್ಲ ಎಂದು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.