ಕೊರೊನಾ ಮಹಾಮಾರಿ ಕಾಣಿಸಿಕೊಂಡ ದಿನದಿಂದಲೂ ವಿಶ್ವದೆಲ್ಲೆಡೆ ಭಾರಿ ಆತಂಕ ಮೂಡಿಸಿದೆ. ಈ ಆತಂಕ ಹೋಗಿಸಲು ಅಗತ್ಯವಿರುವ ಲಸಿಕೆ ಸಿಗದಿರುವುದೇ ಅನೇಕರ ಆತಂಕಕ್ಕೆ ಕಾರಣವಾಗಿದೆ.
ಆರಂಭದಲ್ಲಿ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಮಾಡಿಕೊಂಡರು, ಬಳಿಕ ಆರ್ಥಿಕತೆಯ ದೃಷ್ಟಿಯಿಂದ ದೈನಂದಿನ ಸ್ಥಿತಿಗೆ ಎಲ್ಲ ರಾಷ್ಟ್ರಗಳು ಬಂದಿವೆ. ಆದರೂ ಜನ ತಮ್ಮ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿಕೊಂಡು, ಜನರಿಂದ ಸಾಧ್ಯವಾದಷ್ಟು ದೂರ ಉಳಿಯಲು ಯತ್ನಿಸುತ್ತಿದ್ದಾರೆ.
ಇದೀಗ ಈ ಪ್ರಯತ್ನಕ್ಕೆ ಭಿನ್ನ ವಿಭಿನ್ನ ಪ್ರಯತ್ನ ನಡೆದಿವೆ. ಬ್ರೆಜಿಲ್‌ನ ಹಿರಿಯ ಜೋಡಿಗಳಿಬ್ಬರೂ, ಸೋಂಕಿನಿಂದ ತಪ್ಪಿಸಿಕೊಳ್ಳಲು ಗಗನಯಾತ್ರಿಗಳ ಧಿರಿಸನ್ನು ಉಟ್ಟು ಬೀಚ್‌ಗೆ ಬಂದಿದ್ದಾರೆ. ಇದೀಗ ಈ ರೀತಿ ಬಂದಿರುವ ಫೋಟೋ ಭಾರಿ ವೈರಲ್ ಆಗಿದೆ.
ಜೋಡಿಗಳ ವಿನೂತನ ಫ್ಯಾಷನ್ ನ್ನು ಕಂಡು ಅನೇಕರು ಬೆರಗಾಗಿದ್ದಾರೆ. ಇದರ ಜತೆ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಈ ಫೋಟೋ ಲಕ್ಷಾಂತರ ಲೈಕ್ ಗಳು ಬಂದಿವೆ.
https://www.instagram.com/p/CCjB95Oh_3e/?utm_source=ig_embed