
ಪ್ರಧಾನಿ ನರೇಂದ್ರ ಮೋದಿಯವರಿಗೆ ನಮಸ್ಕಾರಗಳು, ಭಾರತದಿಂದ ಬ್ರೆಜಿಲ್ಗೆ ಲಸಿಕೆಯನ್ನ ರಫ್ತು ಮಾಡಲು ನೆರವಾದ ನಿಮ್ಮ ಸಹಾಯಕ್ಕೆ ಧನ್ಯವಾದಗಳು. ಎಂದು ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಟ್ವೀಟ್ ಮಾಡಿದ್ದಾರೆ.
ಬೋಲ್ಸನಾರೋ ತಮ್ಮ ಟ್ವೀಟ್ನಲ್ಲಿ ಆಂಜನೇಯ ಪರ್ವತದ ಜೊತೆಯಲ್ಲಿ ಕೊರೊನಾ ಲಸಿಕೆಯನ್ನೂ ಹೊತ್ತುಕ್ಕೊಂಡು ಬರುತ್ತಿರುವ ಫೋಟೋವೊಂದನ್ನ ಬ್ರೆಜಿಲ್ ಅಧ್ಯಕ್ಷ ಶೇರ್ ಮಾಡಿದ್ದಾರೆ. ರಾಮಾಯಣದ ಕತೆಯಲ್ಲಿ ಈ ಪ್ರಸಂಗ ಬರುತ್ತೆ. ಗಾಯಗೊಂಡು ಮೂರ್ಛೆ ಹೋಗಿದ್ದ ಲಕ್ಷ್ಮಣನನ್ನ ರಕ್ಷಿಸೋಕೆ ರಾಮ ಸಂಜೀವಿನಿ ಮೂಲಿಕೆಯನ್ನ ತರುವಂತೆ ಹನುಮಂತನಿಗೆ ಸೂಚನೆ ನೀಡುತ್ತಾನೆ. ಆಗ ಹನುಮಂತ ಸಂಜೀವಿನಿ ಮೂಲಿಕೆಯಿದ್ದ ಸಂಪೂರ್ಣ ಪರ್ವತವನ್ನೇ ಹೊತ್ತುಕ್ಕೊಂಡು ಬರುತ್ತಾನೆ.