alex Certify ಆಂಜನೇಯನ ಫೋಟೋ ಶೇರ್​ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್​ ಅಧ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಜನೇಯನ ಫೋಟೋ ಶೇರ್​ ಮಾಡಿ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಬ್ರೆಜಿಲ್​ ಅಧ್ಯಕ್ಷ

ಎರಡು ಮಿಲಿಯನ್​ ಡೋಸ್​ ಕೋವಿಶೀಲ್ಡ್ ಲಸಿಕೆ ಹೊತ್ತ ಭಾರತೀಯ ವಿಮಾನವು ಮುಂಬೈನಿಂದ ಶುಕ್ರವಾರ ಮುಂಜಾನೆ ಬ್ರೆಜಿಲ್​ ತಲುಪುತ್ತಿದ್ದಂತೆಯೇ ಬ್ರೆಜಿಲ್​ ಅಧ್ಯಕ್ಷ ಜೈರ್​ ಬೋಲ್ಸನಾರೋ ಟ್ವಿಟರ್​​ನಲ್ಲಿ ಪ್ರಧಾನಿ ಮೋದಿಗೆ ವಿಶೇಷ ರೀತಿಯಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೆ ನಮಸ್ಕಾರಗಳು, ಭಾರತದಿಂದ ಬ್ರೆಜಿಲ್​​ಗೆ ಲಸಿಕೆಯನ್ನ ರಫ್ತು ಮಾಡಲು ನೆರವಾದ ನಿಮ್ಮ ಸಹಾಯಕ್ಕೆ ಧನ್ಯವಾದಗಳು. ಎಂದು ಬ್ರೆಜಿಲ್​ ಅಧ್ಯಕ್ಷ ಜೈರ್​ ಬೊಲ್ಸನಾರೋ ಟ್ವೀಟ್​ ಮಾಡಿದ್ದಾರೆ.

ಬೋಲ್ಸನಾರೋ ತಮ್ಮ ಟ್ವೀಟ್​​ನಲ್ಲಿ ಆಂಜನೇಯ ಪರ್ವತದ ಜೊತೆಯಲ್ಲಿ ಕೊರೊನಾ ಲಸಿಕೆಯನ್ನೂ ಹೊತ್ತುಕ್ಕೊಂಡು ಬರುತ್ತಿರುವ ಫೋಟೋವೊಂದನ್ನ ಬ್ರೆಜಿಲ್​ ಅಧ್ಯಕ್ಷ ಶೇರ್​ ಮಾಡಿದ್ದಾರೆ. ರಾಮಾಯಣದ ಕತೆಯಲ್ಲಿ ಈ ಪ್ರಸಂಗ ಬರುತ್ತೆ. ಗಾಯಗೊಂಡು ಮೂರ್ಛೆ ಹೋಗಿದ್ದ ಲಕ್ಷ್ಮಣನನ್ನ ರಕ್ಷಿಸೋಕೆ ರಾಮ ಸಂಜೀವಿನಿ ಮೂಲಿಕೆಯನ್ನ ತರುವಂತೆ ಹನುಮಂತನಿಗೆ ಸೂಚನೆ ನೀಡುತ್ತಾನೆ. ಆಗ ಹನುಮಂತ ಸಂಜೀವಿನಿ ಮೂಲಿಕೆಯಿದ್ದ ಸಂಪೂರ್ಣ​ ಪರ್ವತವನ್ನೇ ಹೊತ್ತುಕ್ಕೊಂಡು ಬರುತ್ತಾನೆ.

– O Brasil sente-se honrado em ter um grande parceiro para superar um obstáculo global. Obrigado por nos auxiliar com as exportações de vacinas da Índia para o Brasil.

– Dhanyavaad! धनयवाद pic.twitter.com/OalUTnB5p8

— Jair M. Bolsonaro (@jairbolsonaro) January 22, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...