alex Certify ಕೊರೊನಾ ಶಾಕ್: ಶವಗಳನ್ನು ಹೂಳಲೂ ಸಿಗುತ್ತಿಲ್ಲ ಜಾಗ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಶಾಕ್: ಶವಗಳನ್ನು ಹೂಳಲೂ ಸಿಗುತ್ತಿಲ್ಲ ಜಾಗ…!

ಸಾವೋಪೌಲೊ: ಕರೋನಾ ಸಾವಿನಿಂದ ಕಂಗೆಟ್ಟಿರುವ ಬ್ರೆಜಿಲ್ ದೇಶದ ಸಾವೋಪೌಲೊ ನಗರದಲ್ಲಿ ಶವಗಳನ್ನು ಹೂಳಲೂ ಜಾಗ ಇಲ್ಲದ ಪರಿಸ್ಥಿತಿ ಎದುರಾಗಿದೆ.

12 ಲಕ್ಷ ಜನಸಂಖ್ಯೆ ಇರುವ ಆ ಮಹಾನಗರದಲ್ಲಿ ಗುರುವಾರದವರೆಗೆ 5480 ಜನ ಕೊರೊನಾದಿಂದ ಮೃತಪಟ್ಟಿದ್ದಾರೆ. ಆಗಸ್ಟ್ ನಲ್ಲಿ ಸೋಂಕಿತರ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

ಇದರಿಂದ ನಗರ ಆಡಳಿತ ಕಳೆದ ಮೂರು ವರ್ಷಗಳಿಂದ ಮೃತಪಟ್ಟವರ ಅಸ್ತಿ ಪಂಜರಗಳನ್ನು ಹೂತಲ್ಲಿಂದ ಹೊರ ತೆಗೆಯಲು ನಿರ್ಧರಿಸಿದೆ. ಆ ಜಾಗದಲ್ಲಿ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನಡೆಸಲಾಗುವುದು ಎಂದು ವಿವರಿಸಿದೆ.

ಹೊರ ತೆಗೆದ ಅಸ್ತಿಪಂಜರಗಳಿಗೆ ಸಂಖ್ಯೆ ಬರೆದ ಪ್ಲಾಸ್ಟಿಕ್ ‌ಕವರ್ ನಲ್ಲಿ ತುಂಬಿ 12 ಕಂಟೇನರ್ ನಲ್ಲಿ ಸಂರಕ್ಷಿಸಿ ಇಡಲಾಗುವುದು ಎಂದು ತಿಳಿಸಲಾಗಿದೆ.‌ ಇನ್ನು 15 ದಿನಗಳ ಒಳಗೆ ಕಂಟೇನರ್ ಗಳು ಸ್ಮಶಾನ ತಲುಪಲಿವೆ.

ಬ್ರೆಜಿಲ್ ನಲ್ಲಿ ಇದುವರೆಗೂ 42 ಸಾವಿರ ಜನರು ಕೊರೊನಾಗೆ ಬಲಿಯಾಗಿದ್ದಾರೆ. ರೋಗಕ್ಕೆ ವಿಶ್ವದಲ್ಲೇ ಅತಿಹೆಚ್ಚು ಜನ ಸಾವನ್ನಪ್ಪಿದ ಎರಡನೇ ದೇಶ ಬ್ರೆಜಿಲ್ ಆಗಿದೆ.‌

ಸಾವೋಪೌಲೊ ಮಹಾ ನಗರದಲ್ಲಿ ಶೇ.70 ರಷ್ಟು‌ ತುರ್ತು ನಿಗಾ ಘಟಕದ ಹಾಸಿಗೆಗಳು ಕೊರೋನಾ ರೋಗಿಗಳಿಂದ ತುಂಬಿವೆ.‌ ಇದೇ ವಾರದಿಂದ ಲಾಕ್‌ಡೌನ್ ಸಡಿಲ ಮಾಡಿ ಒಂದಿಷ್ಟು ಅಂಗಡಿಗಳನ್ನು ತೆರೆಯಲಾಗುವುದು ಎಂದು ಮೇಯರ್ ಬ್ರುನೊ ಕೋವಾಸ್ ತಿಳಿಸಿದ್ದು, ಇನ್ನಷ್ಟು ಆತಂಕಕ್ಕೆ‌ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...