alex Certify ನಿಮ್ಮನ್ನು ಚಕಿತರನ್ನಾಗಿಸುತ್ತೆ ಬೆಕ್ಕಿನ ಮುಂದೆ ನಿಂತ ಇಲಿ ಫೋಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮನ್ನು ಚಕಿತರನ್ನಾಗಿಸುತ್ತೆ ಬೆಕ್ಕಿನ ಮುಂದೆ ನಿಂತ ಇಲಿ ಫೋಟೋ…!

ಟಾಮ್ ಅಂಡ್ ಜೆರ್ರಿ ಯಾರಿಗೆ ಗೊತ್ತಿಲ್ಲ ಹೇಳಿ? ಇಲಿ ಹಾಗೂ ಬೆಕ್ಕಿನ ನಡುವಿನ ಶತ್ರುತ್ವ ಮುಗಿಯದ ಕಥೆ. ಆದರೆ ಟಾಮ್ ಅಂಡ್ ಜೆರ್ರಿಯಲ್ಲಿ ಬೆಕ್ಕನ್ನು ಸತಾಯಿಸುವ ಇಲಿಯ ಸಾಹಸ ಮಕ್ಕಳಿಗೆ ಅಚ್ಚುಮೆಚ್ಚು. ಹಾಗೆಂದು ಇಲಿ ಎಂದಾದರೂ ಬೆಕ್ಕಿಗೆ ಸೆಡ್ಡು ಹೊಡೆಯಲು ಸಾಧ್ಯವೇ?

ಆದರೆ ಇಲ್ಲೊಂದು ಫೋಟೋ ವೈರಲ್ ಆಗಿದೆ. ಸ್ಟೀಫನ್ ಮೆಕ್ಡೊನಾಲ್ಡ್ಸ್ ಎಂಬುವವರು ತಮ್ಮ ಮನೆಯಲ್ಲಿ ಕಾಫಿ ತಯಾರಿಸುತ್ತಿದ್ದಾಗ, ಪಕ್ಕದ ಕೋಣೆಯಿಂದ ವಿಚಿತ್ರ ಶಬ್ದ ಬರುವುದು ಕೇಳಿಸಿದೆ. ಅಲ್ಲಿ ಹೋಗಿ ನೋಡಿದಾಗ ಒಂದು ಸಣ್ಣ ಇಲಿಯ ಎದುರು ನಿಂತಿದ್ದ ಅಚ್ಚರಿಯನ್ನು ನೋಡಿದ್ದಾರೆ.

ಮಗಳು ಡಯಾನ ಸಾಕಿದ ಕಿಯಾರ ಹೆಸರಿನ ಬೆಕ್ಕು ಹಾಗೂ ಅದರ ಎದುರು ಇದ್ದ ಇಲಿ ನಡುವೆ ಪದಗಳ ವಿನಿಮಯವನ್ನು ಅವರು ಕಂಡಿದ್ದಾರೆ. ಸಾವಧಾನವಾಗಿ ಫೋಟೋವನ್ನು ಕೂಡ ಕ್ಲಿಕ್ಕಿಸಿದ್ದಾರೆ. ಹಾಗೆಯೇ ಇಲಿ ಧೈರ್ಯದಿಂದ ಬೆಕ್ಕನ್ನು ಎದುರಿಸಿ ನಿಂತಿದ್ದನ್ನು ಸೂಕ್ಷ್ಮವಾಗಿ ಕಂಡಿದ್ದಾರೆ.

ಅಂದಹಾಗೆ ಇದೀಗ ಇಲಿಗೆ ಸ್ಟುವರ್ಟ್ ಲಿಟಲ್ ಎಂದು ಕುಟುಂಬ ಹೆಸರಿಡಲು ಸಹ ನಿರ್ಧರಿಸಿದ್ದು, ಬೆಕ್ಕಿನೊಂದಿಗೆ ಮುಖಾಮುಖಿಯಾದ ಬಳಿಕ ಇಲಿ ಮನೆಯ ತೋಟದತ್ತ ಸಾಗಿದೆ. ಅದರ ಬರುವಿಕೆಗಾಗಿ ಕುಟುಂಬ ಕಾದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...