ಕೋವಿಡ್-19 ಲಸಿಕೆಯನ್ನು ಇಂಜೆಕ್ಟ್ ಮಾಡುತ್ತಿರುವ ಎರಿಕ್ ವಾಂಡರ್ಲಿ ಹೆಸರಿನ ಈ ಗಂಡು ನರ್ಸ್ಗೆ ತಾನು ಲಸಿಕೆ ಕೊಟ್ಟ ವ್ಯಕ್ತಿಯೊಬ್ಬ ಪ್ರಪೋಸ್ ಮಾಡುತ್ತಾನೆ ಎಂಬ ಕಲ್ಪನೆಯೇ ಇರಲಿಲ್ಲ.
ತನ್ನ ಬಾಯ್ಫ್ರೆಂಡ್ ರಾಬಿ ವರ್ಗಾಸ್ಗೆ ಲಸಿಕೆ ಕೊಡಲು ಮುಂದಾದ ವಾಂಡರ್ಲಿಗೆ ಈ ಪ್ರಪೋಸಲ್ ಬಂದಿದೆ. ಆರೋಗ್ಯ ಕೇಂದ್ರದಲ್ಲಿದ್ದ ಇತರರ ಸಮ್ಮುಖದಲ್ಲಿ ತನ್ನ ಮಂಡಿಯೂರಿದ ರಾಬಿ, ವಾಂಡರ್ಲಿಗೆ ಉಂಗುರವನ್ನು ಕೊಟ್ಟು ಪ್ರಪೋಸ್ ಮಾಡಿದ್ದಾನೆ. ಅದಕ್ಕೆ ವಾಂಡರ್ಲಿ ಎಸ್ ಎಂದಿದ್ದಾರೆ.
ಅಮೆರಿಕದ ದಕ್ಷಿಣ ಡಕೋಟಾದ ಕಾಂಟನ್ ಎಂಬ ಊರಿನ ಈ ಸಲಿಂಗಿಗಳು ಬಹಳ ದಿನಗಳಿಂದ ಸಂಬಂಧದಲ್ಲಿದ್ದರು ಎನ್ನಲಾಗಿದೆ.
https://www.facebook.com/watch/?v=2873417049537840&t=1