ವ್ಯಾಲೆಂಟೈನ್ಸ್ ಡೇಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಪ್ರೇಮಿಗಳು ವಿಶೇಷ ದಿನದಂದು ಯಾವ್ಯಾವ ಉಡುಗೊರೆಗಳನ್ನ ಕೊಡಬೇಕು ಎಂದು ಪ್ಲಾನ್ ಮಾಡ್ತಿರ್ತಾರೆ.
ಇವೆಲ್ಲದರ ಮಧ್ಯೆ ಇಲ್ಲೊಬ್ಬ ವ್ಯಕ್ತಿ ನೀವು ಬಾಡಿಗೆ ಕೊಟ್ಟರೆ ನಾನು ಬಾಯ್ಫ್ರೆಂಡ್ ಆಗೋಕೆ ರೆಡಿ ಇದ್ದೀನಿ ಎಂದು ಬೋರ್ಡ್ ಹಿಡಿದುಕೊಂಡು ತಿರುಗುತ್ತಾ ಇದ್ದಾನೆ. ಅಂದಹಾಗೆ ಈತ ಈ ಉದ್ಯಮವನ್ನ ಕಳೆದ ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದಾನೆ.
ಅಂದಹಾಗೆ ಈ ಬಾಡಿಗೆ ಬಾಯ್ಫ್ರೆಂಡ್ನ ಹೆಸರು ಶಕುಲ್. ಅನೇಕರಿಂದ ತಿರಸ್ಕರಿಸಲ್ಪಟ್ಟು , ಪ್ರೀತಿಯಲ್ಲಿ ಹಲವಾರು ಬಾರಿ ವಿಫಲನಾದ ಬಳಿಕ ಬೇಸತ್ತು ಶಕುಲ್ ಈ ಉದ್ಯಮವನ್ನ ಆರಂಭಿಸಿದ್ದಾನಂತೆ.
ಪ್ರತಿ ಬಾರಿ ವ್ಯಾಲೆಂಟೈನ್ಸ್ ಡೇ ಬಂದಾಗಲೂ ಪ್ರೇಮ ನಿವೇದನೆ ವಿಚಾರದಲ್ಲಿ ತಾನೆಷ್ಟು ನತದೃಷ್ಟ ಎಂದು ಶಕುಲ್ಗೆ ಅನಿಸುತ್ತಂತೆ. ಶಕುಲ್ ಇಲ್ಲಿಯವರೆಗೆ ಪ್ರೇಮ ನಿವೇದನೆ ಮಾಡಿದ ಪ್ರತಿಯೊಬ್ಬ ಹುಡುಗಿಯರೂ ಈತನನ್ನ ನಿರಾಕರಿಸಿದ್ದು ಕೇವಲ ನಿನ್ನ ಸ್ನೇಹ ಮಾತ್ರ ಸಾಕು ಎಂದು ಹೇಳಿದ್ದಾರಂತೆ.
ಇಷ್ಟೆಲ್ಲಾ ಕತೆ ಬಳಿಕ ಒಂದಿನ ಶಕುಲ್ಗೆ ನನ್ನಂತೆ ಕೆಲ ಹುಡುಗಿಯರಿಗೂ ಇಂತಹ ಅನುಭವ ಆಗಿರಬಹುದು. ಅವರನ್ನೂ ಅನೇಕರು ನಿರಾಕರಿಸಿದ್ದಿರಬಹುದು ಎಂದು ಅನಿಸಿತಂತೆ.
ವ್ಯಾಲೆಂಟೈನ್ಸ್ ಡೇ ಯಂದು ಉಚಿತ ಡಿವೋರ್ಸ್ ಆಫರ್....!
ಹೀಗಾಗಿ ಕಳೆದ ಮೂರು ವರ್ಷಗಳಿಂದ ಈತ ವ್ಯಾಲೆಂಟೈನ್ಸ್ ಡೇಯಂದು ಬಾಡಿಗೆ ಬಾಯ್ಫ್ರೆಂಡ್ ಆಗಿ ಕೆಲಸ ಮಾಡುತ್ತಾನೆ. ಈತನಿಗೆ ಈಗ ಅನೇಕ ಮಹಿಳೆಯರು ಹಾಗೂ ಯುವತಿಯರು ಬಾಡಿಗೆಗೆ ಬೇಕೆಂದು ಮೆಸೇಜ್ ಮಾಡುತ್ತಾರಂತೆ. ಕಳೆದ ಮೂರು ವರ್ಷಗಳಲ್ಲಿ ಈತ 45ಕ್ಕೂ ಹೆಚ್ಚು ಮಹಿಳೆಯರ ಜೊತೆ ಡೇಟಿಂಗ್ ಮಾಡಿದ್ದಾನಂತೆ.