ಪರ್ತ್: ಕಿವುಡಾಗಿ ಹುಟ್ಟಿದ ಮಗುವಿಗೆ ಸತತ ಪ್ರಯತ್ನದ ಬಳಿಕ ಕಿವಿ ಕೇಳಿಸುತ್ತಿದೆ ಎಂದು ತಿಳಿದ ಪಾಲಕರ ಸಂತೋಷಕ್ಕೆ ಪಾರವೇ ಇಲ್ಲ. ಆಸ್ಟ್ರೇಲಿಯಾದ ಕಿವುಡ ಮಗುವಿನ ಪಾಲಕರಾದ ದಂಪತಿಯ ಹೃದಯಸ್ಪರ್ಶಿ ವಿಡಿಯೋವೊಂದು ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಪರ್ತ್ ನ ಐಶಾ ಮಾರಿಯಾ ಸ್ಟೋನ್ ಹಾಗೂ ಕ್ರಿಸ್ ರ್ಯಾಕ್ಸ್ ಅವರ ಪುತ್ರ ಹ್ಯಾರಿಸನ್ ರ್ಯಾಕ್ಸ್ ಗೆ ಕಿವಿ ಕೇಳಿಸದು ಎಂಬ ವಿಚಾರ ಆತ ಹುಟ್ಟಿ 14 ನೇ ದಿನಕ್ಕೆ ಗೊತ್ತಾಗಿತ್ತು. ಇದರಿಂದ ಇಬ್ಬರೂ ಆತಂಕಗೊಂಡಿದ್ದರು.
ಸ್ನಾನಗೃಹದ ಹಿಂದಿದ್ದ ದೊಡ್ಡ ರಹಸ್ಯ ಭೇದಿಸಿದ ಮಹಿಳೆ…! ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ವಿಡಿಯೋ
ಪಶ್ಚಿಮ ಆಸ್ಟ್ರೇಲಿಯಾದ ಟೆಲೆಥಾನ್ ಸ್ಪೀಚ್ ಆ್ಯಂಡ್ ಹಿಯರಿಂಗ್ ಎಂಬ ಸಂಸ್ಥೆಯ ಮೊರೆ ಹೋಗಿದ್ದರು. ಬಾಲಕ ಹ್ಯಾರಿಸನ್ 6 ತಿಂಗಳಿದ್ದಾಗಲೇ ಆತ ತಾಯಿಯ ಧ್ವನಿ ಕೇಳಲಿ ಎಂದು ಕೇಳುವ ಸಾಧನ ಅಳವಡಿಸಲಾಗಿತ್ತು. ಈಗ ಬಾಲಕನಿಗೆ ಎರಡು ವರ್ಷ. ಆತ ಕೇಳಬಲ್ಲ. ಹಾಗೂ ಅದನ್ನಾಧರಿಸಿ ಅಲ್ಪಸ್ವಲ್ಪ ಮಾತನಾಡಬಲ್ಲ. ಹುಟ್ಟಿದಾಗಿನ ಹಾಗೂ ಈಗಿನ ಬಾಲಕನ ವರ್ತನೆ ಹಾಗೂ ಪಾಲಕರ ಪ್ರತಿಕ್ರಿಯೆಯ ಎರಡೂ ಹೃದಯಸ್ಪರ್ಶಿ ವಿಡಿಯೋಗಳು ನೆಟ್ಟಿಗರ ಕಣ್ಣಾಲಿಗಳಲ್ಲಿ ಹನಿ ಮೂಡಿಸಿವೆ.