ಯಾರ್ಡ್ ಸೇಲ್ ಇಲ್ಲವೇ ಗ್ಯಾರೇಜ್ ಸೇಲ್ ಎಂದು ಕರೆಯಲ್ಪಡುವ ವ್ಯಾಪಾರದಲ್ಲಿ ಬಳಕೆಯಾದ ವಸ್ತುಗಳನ್ನ ಮಾರಾಟ ಮಾಡಲಾಗುತ್ತೆ. ಇಂತಹ ಸ್ಥಳದಲ್ಲಿ ವಸ್ತುಗಳನ್ನ ಮಾರಾಟ ಮಾಡೋಕೆ ವ್ಯಾಪಾರಿಗಳು ಪರವಾನಗಿ ಹೊಂದಿರಬೇಕು ಎಂಬ ನಿಬಂಧನೆಯೂ ಇರೋದಿಲ್ಲ.
ಅಂದಹಾಗೆ ಯಾವುದೋ ದೇಶದಲ್ಲಿ ನಡೆಯುವ ಈ ಯಾರ್ಡ್ ಸೇಲ್ ಬಗ್ಗೆ ನಾವೇಕೆ ಮಾತನಾಡುತ್ತಿದ್ದೇವೆ ಎಂದು ಕೊಂಡ್ರಾ..? ಯಾಕಂದ್ರೆ ಅಮೆರಿಕದಲ್ಲಿ ಯಾರ್ಡ್ ಸೇಲ್ನಲ್ಲಿ ನಡೆದ ಘಟನೆಯೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಸೆಕೆಂಡ್ ಹ್ಯಾಂಡ್ ಸೇಲ್ನಲ್ಲಿ ವ್ಯಕ್ತಿಯೊಬ್ಬರು 2500 ರೂಪಾಯಿ ಕೊಟ್ಟು ಪಿಂಗಾಣಿ ಪಾತ್ರೆಯೊಂದನ್ನ ಖರೀದಿ ಮಾಡಿದ್ದರು. ಆದರೆ ಬಳಿಕ ಈ ಪಿಂಗಾಣಿ ಪಾತ್ರೆ ಚೀನಾದ 15ನೇ ಶತಮಾನದ ಪುರಾತನ ಕಲಾಕೃತಿ ಎಂದು ತಿಳಿದುಬಂದಿದೆ. ಈ ಪಿಂಗಾಣಿ ಪಾತ್ರೆಯ ಮೌಲ್ಯ ಅಂದಾಜು 3,64,72,500 ರೂಪಾಯಿ ಇರಬಹುದೆಂದು ಅಂದಾಜಿಸಲಾಗಿದೆ.
ಚೀನಾದ ಕಲಾಕೃತಿ ಎನ್ನಲಾದ ಈ ಪಿಂಗಾಣಿ ಪಾತ್ರೆಯಲ್ಲಿ ನೀಲಿ ಬಣ್ಣದಲ್ಲಿ ಹೂಗಳ ಚಿತ್ರವನ್ನ ಬಿಡಿಸಲಾಗಿದೆ. ಇದು 6 ಇಂಚು ವ್ಯಾಸ ಹೊಂದಿದೆ. ಈ ಪಾತ್ರೆ ಇದೀಗ ಸೋಥೆಬಿಸ್ನಲ್ಲಿ ಹರಾಜಿಗೆ ಮಾರಾಟವಾಗಲಿದೆ. ಜಗತ್ತಿನಲ್ಲಿ ಇಂತಹ 7 ಪಾತ್ರೆಗಳು ಇರಬಹುದು ಎಂದು ಅಂದಾಜಿಸಲಾಗಿದ್ದು ಅದರಲ್ಲಿ ಒಂದು ಪಾತ್ರೆ ಇದಾಗಿದೆ.