ಸ್ಟಾರ್ಟ್ ಅಪ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಕಂಪನಿಯು ಕ್ರಿಪ್ಟೊಕರೆನ್ಸಿ ರೂಪದಲ್ಲಿ ಸಂಬಳವನ್ನ ನೀಡಿತ್ತು. ಇದೀಗ ಈ ಕ್ರಿಪ್ಟೊಕರೆನ್ಸಿ ಹಿಂದಿರುಗಿಸುವಂತೆ ಕಂಪನಿ ಹೇಳಿದ್ದು ಮಹಿಳಾ ಸಿಬ್ಬಂದಿ ಶಾಕ್ ಆಗಿದ್ದಾರೆ. ಏಕೆಂದರೆ ಈಗ ಅದರ ಬೆಲೆ ಗಗನಕ್ಕೇರಿದೆ.
ಸಿಬ್ಬಂದಿಗೆ ಕಳೆದ ವರ್ಷ ಆಗಸ್ಟ್ನಲ್ಲಿ ಕ್ರಿಪ್ಟೊಕರೆನ್ಸಿ ರೂಪದಲ್ಲಿ ಹಣ ನೀಡಲಾಗಿತ್ತು. ಇದೀಗ ಈ ಕ್ರಿಪ್ಟೊಕರೆನ್ಸಿಯ ಬೆಲೆ ಬರೋಬ್ಬರಿ 700 ಪಟ್ಟು ಏರಿಕೆಯಾಗಿದೆ. ಆದರೆ ಇದೀಗ ಬಾಸ್ ಕ್ರಿಪ್ಟೊಕರೆನ್ಸಿಯನ್ನ ವಾಪಸ್ ಕೇಳುತ್ತಿದ್ದು ಸಿಬ್ಬಂದಿ ಶಾಕ್ ಆಗಿದ್ದಾರೆ.
ಇನ್ನು ಈ ಸಂಬಂಧ ಮಾತನಾಡಿದ ಮಹಿಳಾ ಸಿಬ್ಬಂದಿ, ನಾನು ಸಹ ಇಲ್ಲಿ ಕೆಲಸ ಮಾಡಿದ್ದೆ. ಕಂಪನಿ ಆದಾಯ ಹೆಚ್ಚಿಸುವಲ್ಲಿ ವಿಫಲವಾದ ಕಾರಣ ಕ್ರಿಪ್ಟೊ ಕರೆನ್ಸಿಯನ್ನ ವಾಪಸ್ ನೀಡುವಂತೆ ಬಾಸ್ ಹೇಳಿದ್ದಾರೆ ಎಂದು ಹೇಳಿದ್ರು.
ಸಾಲಗಾರರಿಗೆ ಗುಡ್ ನ್ಯೂಸ್: ಮತ್ತೆ ಮೊರಾಟೋರಿಯಂ ಕೊಡುಗೆ –ಸಾಲ ಮರುಪಾವತಿ ಅವಧಿ ವಿಸ್ತರಣೆ, ಬಡ್ಡಿದರ ಬದಲಾವಣೆಗೆ ಅವಕಾಶ
ನನಗೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ನಾನು ಈ ಕಂಪನಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಈಗ ಇಷ್ಟು ದೊಡ್ಡ ಮೊತ್ತದ ಹಣವನ್ನ ವಾಪಸ್ ಮಾಡಬೇಕೆ..? ಈ ಸಮಸ್ಯೆಗೆ ನ್ಯಾಯಯುತ ಪರಿಹಾರ ಏನಿರಬಹುದು ಎಂದು ನಿಮಗೆ ಏನಿಸುತ್ತೆ..? ಎಂದು ಟ್ವಿಟರ್ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಟ್ವಿಟರ್ನಲ್ಲಿ ಈ ಪೋಸ್ಟ್ ವೈರಲ್ ಆಗಿದ್ದು ಬಹುತೇಕ ಮಂದಿ ನೀವು ಇಷ್ಟು ದೊಡ್ಡ ಮೊತ್ತದ ಹಣವನ್ನ ಹಿಂದಿರುಗಿಸೋದು ಸರಿ ಅಲ್ಲ ಎಂದೇ ಹೇಳಿದ್ದಾರೆ.