alex Certify ಸಂಬಳದ 700 ಪಟ್ಟು ಅಧಿಕ ಹಣ ವಾಪಸ್​ ಕೊಡುವಂತೆ ಕೇಳಿದ ಬಾಸ್​..! ಕಾರಣ ತಿಳಿದ್ರೆ ಶಾಕ್‌ ಆಗ್ತೀರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಳದ 700 ಪಟ್ಟು ಅಧಿಕ ಹಣ ವಾಪಸ್​ ಕೊಡುವಂತೆ ಕೇಳಿದ ಬಾಸ್​..! ಕಾರಣ ತಿಳಿದ್ರೆ ಶಾಕ್‌ ಆಗ್ತೀರಾ

ಸ್ಟಾರ್ಟ್​ ಅಪ್​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಕಂಪನಿಯು ಕ್ರಿಪ್ಟೊಕರೆನ್ಸಿ ರೂಪದಲ್ಲಿ ಸಂಬಳವನ್ನ ನೀಡಿತ್ತು. ಇದೀಗ ಈ ಕ್ರಿಪ್ಟೊಕರೆನ್ಸಿ ಹಿಂದಿರುಗಿಸುವಂತೆ ಕಂಪನಿ ಹೇಳಿದ್ದು ಮಹಿಳಾ ಸಿಬ್ಬಂದಿ ಶಾಕ್​ ಆಗಿದ್ದಾರೆ. ಏಕೆಂದರೆ ಈಗ ಅದರ ಬೆಲೆ ಗಗನಕ್ಕೇರಿದೆ.

ಸಿಬ್ಬಂದಿಗೆ ಕಳೆದ ವರ್ಷ ಆಗಸ್ಟ್​​ನಲ್ಲಿ ಕ್ರಿಪ್ಟೊಕರೆನ್ಸಿ ರೂಪದಲ್ಲಿ ಹಣ ನೀಡಲಾಗಿತ್ತು. ಇದೀಗ ಈ ಕ್ರಿಪ್ಟೊಕರೆನ್ಸಿಯ ಬೆಲೆ ಬರೋಬ್ಬರಿ 700 ಪಟ್ಟು ಏರಿಕೆಯಾಗಿದೆ. ಆದರೆ ಇದೀಗ ಬಾಸ್​ ಕ್ರಿಪ್ಟೊಕರೆನ್ಸಿಯನ್ನ ವಾಪಸ್​ ಕೇಳುತ್ತಿದ್ದು ಸಿಬ್ಬಂದಿ ಶಾಕ್​ ಆಗಿದ್ದಾರೆ.

ಇನ್ನು ಈ ಸಂಬಂಧ ಮಾತನಾಡಿದ ಮಹಿಳಾ ಸಿಬ್ಬಂದಿ, ನಾನು ಸಹ ಇಲ್ಲಿ ಕೆಲಸ ಮಾಡಿದ್ದೆ. ಕಂಪನಿ ಆದಾಯ ಹೆಚ್ಚಿಸುವಲ್ಲಿ ವಿಫಲವಾದ ಕಾರಣ ಕ್ರಿಪ್ಟೊ ಕರೆನ್ಸಿಯನ್ನ ವಾಪಸ್​ ನೀಡುವಂತೆ ಬಾಸ್​ ಹೇಳಿದ್ದಾರೆ ಎಂದು ಹೇಳಿದ್ರು.

ಸಾಲಗಾರರಿಗೆ ಗುಡ್ ನ್ಯೂಸ್: ಮತ್ತೆ ಮೊರಾಟೋರಿಯಂ ಕೊಡುಗೆ –ಸಾಲ ಮರುಪಾವತಿ ಅವಧಿ ವಿಸ್ತರಣೆ, ಬಡ್ಡಿದರ ಬದಲಾವಣೆಗೆ ಅವಕಾಶ

ನನಗೆ ಏನು ಮಾಡಬೇಕು ಎಂದೇ ತೋಚುತ್ತಿಲ್ಲ. ನಾನು ಈ ಕಂಪನಿಯಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಈಗ ಇಷ್ಟು ದೊಡ್ಡ ಮೊತ್ತದ ಹಣವನ್ನ ವಾಪಸ್​ ಮಾಡಬೇಕೆ..? ಈ ಸಮಸ್ಯೆಗೆ ನ್ಯಾಯಯುತ ಪರಿಹಾರ ಏನಿರಬಹುದು ಎಂದು ನಿಮಗೆ ಏನಿಸುತ್ತೆ..? ಎಂದು ಟ್ವಿಟರ್​ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಈ ಪೋಸ್ಟ್ ವೈರಲ್​ ಆಗಿದ್ದು ಬಹುತೇಕ ಮಂದಿ ನೀವು ಇಷ್ಟು ದೊಡ್ಡ ಮೊತ್ತದ ಹಣವನ್ನ ಹಿಂದಿರುಗಿಸೋದು ಸರಿ ಅಲ್ಲ ಎಂದೇ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...