alex Certify ಲಾಕ್ಡೌನ್ ಬೋರ್ ಹೋಗಲಾಡಿಸಲು ಲಾಲಿ ಪಾಪ್ ನೆಕ್ಕಿ ಲೆಕ್ಕ ಇಟ್ಟ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ಡೌನ್ ಬೋರ್ ಹೋಗಲಾಡಿಸಲು ಲಾಲಿ ಪಾಪ್ ನೆಕ್ಕಿ ಲೆಕ್ಕ ಇಟ್ಟ ಯುವಕ

ಚೆಸ್ಟರ್(ಯುಕೆ): ಲಾಕ್‌ಡೌನ್ ಜನರಿಂದ ಏನೇನೋ ಮಾಡಿಸುತ್ತಿದೆ. ಅಂಥದ್ದೇ ಅತಿ ರೋಚಕ ಸುದ್ದಿ ಇಲ್ಲೊಂದಿದೆ.
ಇಲ್ಲೊಬ್ಬ ಹುಡುಗ ಲಾಲಿಪಾಪ್ ಒಂದನ್ನು ಎಷ್ಟು ಬಾರಿ ನೆಕ್ಕಿದರೆ ಖಾಲಿ ಆಗುತ್ತದೆ ಎಂದು ಲೆಕ್ಕ ಮಾಡಿದ್ದಾನೆ.

ಜೇಮ್ಸ್ ಹಂಟ್ ಎನ್ನುವ 23 ವರ್ಷದ ವಿದ್ಯಾರ್ಥಿ ಈ ವಿಚಿತ್ರ ಕೆಲಸ ಮಾಡಿದಾತ. ಒಂದು ಚುಪಾಚುಪ್ ಲಾಲಿಪಾಪ್ ತೆಗೆದುಕೊಂಡು, ನೆಕ್ಕುತ್ತಾ ಲೆಕ್ಕ ಮಾಡುತ್ತಾ, ಪ್ರತಿ 250 ಬಾರಿಗೆ ಅದನ್ನು ಸ್ನಾಪ್ ಚಾಟ್ ನಲ್ಲಿ ಅಪ್ಡೇಟ್ ಮಾಡುತ್ತಾ ಹೋಗಿದ್ದಾನೆ.

500 ಬಾರಿ ನೆಕ್ಕುವಷ್ಟರಲ್ಲಿ ಬಾಯಿ ನೋವು ಬಂದು ಹೋಗಿತ್ತು. ಆದರೂ ಹಿಡಿದ ಕೆಲಸ ಬಿಡದೆ, 1417 ಬಾರಿ ನೆಕ್ಕುವಷ್ಟರಲ್ಲಿ ಲಾಲಿ ಪಾಪ್ ಖಾಲಿಯಾಗಿದೆ. ಲೆಕ್ಕ ಮಾಡಲು ಒಂದು ಆ್ಯಪ್ ನ ಸಹಾಯ ಪಡೆದಿದ್ದು, ಲೆಕ್ಕ ಸರಿಯಾಗಿದೆ ಎಂದು ತೋರಿಸಲು ಹೀಗೆ ಮಾಡಿದ್ದಾಗಿ ಹೇಳಿದ್ದಾನೆ. ಪೂರ್ತಿ ಲಾಲಿ ಪಾಪ್ ಮುಗಿದ ಮೇಲೆ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾನೆ.

ಮನೆಯಲ್ಲಿ ಬೋರ್ ಆದ 23 ವರ್ಷದ, 6.2 ಅಡಿ ಉದ್ದದ, 82 ಕೆ.ಜಿ ಯ ಹುಡುಗ 1417 ಬಾರಿಗೆ ನೆಕ್ಕಿದರೆ ಲಾಲಿ ಪಾಪ್ ಅನ್ನು ಖಾಲಿ ಼ಮಾಡಬಹುದು, ನಿಮ್ಮ ಪ್ರಯೋಗವನ್ನು ಸಹ ಹಂಚಿಕೊಳ್ಳಿ ಎಂದು ಎಂದು ಬರೆದುಕೊಂಡಿದ್ದಾನೆ. ಇವನ ಪ್ರಯೋಗ ಸ್ವಲ್ಪ ಸಮಯದಲ್ಲೇ ಫೇಸ್ ಬುಕ್ ನಲ್ಲಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...