ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನ್ಯೂ ಯಾರ್ಕ್‌ನ ಟೈಮ್ಸ್ ಸ್ಕ್ವೇರ್ ಬಳಿ ಲಕ್ಷೋಪಲಕ್ಷ ಮಂದಿ ನೆರೆದಿರುತ್ತಾರೆ. ಬರಿ ಅಮೆರಿಕದಿಂದ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಿಂದ ಜನರು ಈ ನಗರಕ್ಕೆ ಭೇಟಿ ಕೊಡುತ್ತಾರೆ.
ಡಿಸೆಂಬರ್ 31ರ ಮಧ್ಯರಾತ್ರಿ ಸಂಭ್ರಮದಲ್ಲಿ ಮುಳುಗಿಬಿಡುವ ನ್ಯೂಯಾರ್ಕ್‌ನ ಈ ಸ್ಕ್ವೇರ್ ಈ ಬಾರಿ ಭಣಗುಡುತ್ತಿದೆ.
ಆದರೆ ಹಿಂದಿನ ವರ್ಷಗಳಲ್ಲಿ ಕಂಡು ಬರುತ್ತಿದ್ದ ಚಟುವಟಿಕೆಗಳು ಈ ಮಾಯಾನಗರಿಯಲ್ಲಿ ಈ ಬಾರಿ ಕಾಣದಂತೆ ಆಗಿವೆ. ಕೋವಿಡ್-19 ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದೇ ಇರುವ ಕಾರಣದಿಂದ ಲಾಕ್‌ಡೌನ್ ಪರಿಸ್ಥಿತಿ ಹೊಸ ವರ್ಷದ ಆಚರಣೆಯ ಮೇಲೂ ತನ್ನ ಪ್ರಭಾವ ಬೀರಿದೆ.
ಸದಾ ಗಿಜಿಗುಡುವ ಈ ಚೌಕದ ಬಳಿ ಪೊಲೀಸ್ ಕಾರುಗಳನ್ನು ಬಿಟ್ಟರೆ ಒಬ್ಬೇ ಒಬ್ಬ ವ್ಯಕ್ತಿಯೂ ಇಲ್ಲದ ಇರುವ ಕಾರಣ ಬಿಕೋ ಎನ್ನುತ್ತಿದ್ದು, ನೀರವತೆಯ ದೃಶ್ಯಗಳು ವೈರಲ್ ಆಗಿವೆ.