alex Certify ಸೆಕ್ಸ್ ಡಾಲ್​ ಜೊತೆಗಿನ ವಿವಾಹ ಮುರಿದುಕೊಂಡ ಬಾಡಿ ಬಿಲ್ಡರ್.​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸ್ ಡಾಲ್​ ಜೊತೆಗಿನ ವಿವಾಹ ಮುರಿದುಕೊಂಡ ಬಾಡಿ ಬಿಲ್ಡರ್.​..!

ಸೆಕ್ಸ್​ ಗೊಂಬೆಯನ್ನ ವಿವಾಹವಾಗಿ ಭಾರೀ ಸುದ್ದಿ ಮಾಡಿದ್ದ ಬಾಡಿ ಬಿಲ್ಡರ್​​ ಯುರಿ ಟೊಲೊಚ್ಕೋ ಇದೀಗ ಈ ವಿವಾಹವನ್ನ ಮುರಿದುಕೊಂಡಿರೋದಾಗಿ ಹೇಳಿದ್ದಾರೆ.

ಟೊಲೊಚ್ಕೋ ಕಳೆದ ವರ್ಷ ಮಾರ್ಗೋ ಎಂಬ ಹೆಸರಿನ ಸಿಲಿಕಾನ್​ ಗೊಂಬೆಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇವರ ಮದುವೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು.

ಕಳೆದ ವರ್ಷ ಮಾರ್ಚ್​ ತಿಂಗಳಲ್ಲೇ ಮದುವೆಯಾಗಬೇಕಿದ್ದ ಈ ಜೋಡಿ ಕೊರೊನಾ ವೈರಸ್​ ಕಾರಣದಿಂದಾಗಿ ನವೆಂಬರ್​ ತಿಂಗಳಲ್ಲಿ ವಿವಾಹವಾಗಿತ್ತು. ಆದರೆ ಈ ವಿಶೇಷ ಜೋಡಿ ಇದೀಗ ವೈವಾಹಿಕ ಬಂಧನದಿಂದ ದೂರಾಗಿದೆ.

ಆದರೆ ಸಿಲಿಕಾನ್​ ಗೊಂಬೆಯಾದ ಮಾರ್ಗೋ ಮುರಿದು ಹೋದ ಬಳಿಕ ದುರಸ್ತಿ ಕಾರ್ಯ ಮಾಡಬೇಕಾಗಿ ಬಂತು. ಇದೇ ಕಾರಣಕ್ಕೆ ಇವರಿಬ್ಬರ ನಡುವಿನ ಸಂಬಂಧ ಮುರಿಯಲು ಆರಂಭಿಸಿತು. ಅವಳು ರಿಪೇರಿ ಅಂಗಡಿಯಲ್ಲಿದ್ದ ಸಂದರ್ಭದಲ್ಲಿ ಟೊಲೊಚ್ಕೋ ಬೇರೆ​ ಗೊಂಬೆಗಳ ನಡುವೆ ಸಂಬಂಧ ಹೊಂದಿದ್ದ ವಿಚಾರವನ್ನ ಬಹಿರಂಗಪಡಿಸಿದ್ದ.

ಟಿವಿ ಹುಚ್ಚಿಗೆ ಅಡುಗೆ ಮಾಡದ ಅತ್ತೆ: ಕೋಪಗೊಂಡ ಸೊಸೆ ಮಾಡಿದ್ದೇನು….?

ಇದಾದ ಬಳಿಕ ಲೋಲಾ ಎಂಬ ಹೊಸ ಸೆಕ್ಸ್ ಡಾಲ್​​ ಜೊತೆ ಸಂಬಂಧ ಹೊಂದಿರುವ ಬಗ್ಗೆಯೂ ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಶೇರ್​ ಮಾಡಿದ್ದಾರೆ. ಇದರ ಜೊತೆಯಲ್ಲಿ ಮತ್ತೊಂದು ಗೊಂಬೆಯ ಫೋಟೋವನ್ನೂ ಶೇರ್​ ಮಾಡಿರುವ ಈ ಬಾಡಿ ಬಿಲ್ಡರ್​ ಇದಕ್ಕೊಂದು ಹೆಸರನ್ನ ನೀಡಿ ಎಂದು ಫಾಲೋವರ್ಸ್​ ಬಳಿ ಕೇಳಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...