alex Certify ಪೇಚಿಗೆ ಸಿಲುಕಲು ಕಾರಣವಾಯ್ತು ವರದಿಗಾರ್ತಿ ಹೇಳಿದ ಕೊನೆಯ ಶಬ್ದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಚಿಗೆ ಸಿಲುಕಲು ಕಾರಣವಾಯ್ತು ವರದಿಗಾರ್ತಿ ಹೇಳಿದ ಕೊನೆಯ ಶಬ್ದ…!

ವಿಶ್ವದಲ್ಲಿ ಕೊರೊನಾ ಶುರುವಾದ ಬಳಿಕ ಪತ್ರಕರ್ತರಿಗೆ ಶುರುವಾಗಿರುವ ವರ್ಕ್ ಫ್ರಮ್ ಹೋಂ ವೇಳೆ ಆಗುತ್ತಿರುವ ಎಡವಟ್ಟು ಒಂದೆರೆಡಲ್ಲ‌. ಇದೀಗ ಇದೇ ರೀತಿಯ ವಿಡಿಯೋ ಭಾರಿ ವೈರಲ್ ಆಗಿದೆ.

ಹೌದು,‌ ಆಸ್ಟ್ರೇಲಿಯಾ ಮೂಲದ‌ ನ್ಯೂಸ್ 9 ವಾಹಿನಿಯ‌ ವರದಿಗಾರ್ತಿ ಲಾನಾ ಮರ್ಫಿ ಮೆಲ್ಬೋರ್ನ್‌ನಲ್ಲಿರುವ ಪೊಲೀಸ್ ಭದ್ರತೆಯ ಬಗ್ಗೆ ಮಾಹಿತಿ ನೀಡುತ್ತಿದ್ದರು. ಆರಂಭದಲ್ಲಿ ಎಲ್ಲವನ್ನು ಸರಿಯಾಗಿ ಮಾಡಿದ ಅವರು, ಕೊನೆಯದಾಗಿ F*****my life ಎಂದು ಹೇಳಿಬಿಟ್ಟಿದ್ದಾರೆ.

ಆದರೆ ಈ ವೇಳೆಗೆ ಸ್ಟೂಡಿಯೋದಲ್ಲಿರುವವರು ಲೈವ್‌ ನ್ನು ಕಟ್ ಮಾಡಬೇಕಿತ್ತು. ಮಾಡದಿರುವುದೇ ಈ ಎಡವಟ್ಟಿಗೆ ಕಾರಣವಂತೆ.

ಆದರೆ ಈ ಬಗ್ಗೆ ಮರ್ಫಿ ತಮ್ಮ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಈ ತಪ್ಪನ್ನು ಮಾಡಬಾರದಿತ್ತು. ಆದರೂ ನನ್ನ ಬಾಸ್ ಕೆಲಸದಿಂದ ತೆಗೆದಿರುವುದು ನನ್ನ ಪುಣ್ಯ ಎಂದಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಈ ಘಟನೆಯನ್ನು ಕಾಮಿಡಿಯಾಗಿ ತೆಗೆದುಕೊಂಡಿದ್ದು, ಕೆಲವರು ಮರ್ಫಿ ಅವರ ಕೂದಲು ಅತ್ಯುತ್ತಮವಾಗಿದೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...